ಚಿತ್ರದುರ್ಗ: ಕೇಂದ್ರ,ರಾಜ್ಯಸರ್ಕಾರಗಳ ಜನ ವಿರೋಧಿ ನೀತಿ ಪ್ರತಿಭಟಿಸಿ,ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಫೆ.16ರಂದು ಬೃಹತ್ ಜನಾಗ್ರಹ ರ‌್ಯಾಲಿ ಮ ತ್ತು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವುದಾಗಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯಸಂಚಾಲಕ ಕುಮಾರ್ ಸಮತಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬಿಜೆಪಿ ಸರ್ಕಾರಗಳು ಜನತೆ,ಹಿತ ಮರೆತು,ಶ್ರೀಮಂತರ ಹಿತ ಕಾಪಾಡುತ್ತಿವೆ.ಇವರೆ ಡೂ ಸರ್ಕಾರಗಳ ಜನ ವಿರೋಧಿ ನೀತಿಗಳ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಪ್ರಬಲ ಹೋ ರಾಟದಿಂದಾಗಿ ರೈತ ವಿರೋಧಿ ಎಪಿಎಂಸಿ ಕಾಯ್ದೆಯನ್ನು ಕೇಂದ್ರ ಹಿಂಪಡೆದರೂ,ರಾಜ್ಯದಲ್ಲಿನ್ನೂ ಹಿಂಪಡೆಯಲಾಗಿಲ್ಲ. ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ ಹತೋಟಿಗೆ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಹತ್ತಿ,ಕೊಬ್ಬರಿ, ಅ ಡಕೆ,ತೂಗರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಪರಿಹಾರ ಸಂದಾಯ ಮಾಡಿಲ್ಲ. ಪಹಣಿ ಬೆಲೆ ಹೆಚ್ಚಿಸಿ ರೈತರ ಜೇಬಿಗೆ ಸರ್ಕಾರ ಕನ್ನ ಹಾಕಿದೆ.
ರೈತ ಮತ್ತು ದಲಿತರ ಹಕ್ಕುಗಳನ್ನು ಸರ್ಕಾರ ಧಮನ ಮಾಡುತ್ತಿದೆ. ಮಹಿಳೆಯರ ಬದುಕಿಗೆ ಸ್ಪಂದನೆ ಇಲ್ಲದಂತಾಗಿದೆ. ವಿದ್ಯಾರ್ಥಿ ಗಳಲ್ಲಿ ಭರವಸೆ ಕುಂಠಿತ ಮಾಡಿದೆ ಎಂದು ದೂರಿದ ಅವರು,ಅಂದಿನ ಪ್ರತಿಭಟನಾ ರ‌್ಯಾಲಿಗೆ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು. ಧನಂಜಯ, ಷಫಿವುಲ್ಲಾ,ಸತ್ಯಣ್ಣ,ಹನುಮಂತಪ್ಪ ಇದ್ದರು.
-----