ಜಿಲ್ಲೆ

ಜನಸಂಖ್ಯೆ ಸೋಟಕ್ಕೆ ನಿಯಂತ್ರಣ ಅಗತ್ಯ - ಶಾಸಕ ಅಶೋಕ್ ರೈ ಪ್ರತಿಪಾದನೆ - ಪುತ್ತೂರಲ್ಲಿ ದಿನಾಚರಣೆ

Mangaluru - Nishantha Narayana


ಪುತ್ತೂರು: ಜನಸಂಖ್ಯೆಯ ಮೇಲೆ ನಿಯಂತ್ರಣ ಹೇರದೆ ಹೋದರೆ ದೇಶದ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮವಾಗುತ್ತದೆ. ಈ ಕುರಿತು ಯುವ ಪೀಳಿಗೆಗೆ ಮನವರಿಕೆ ಮಾಡಬೇಕಾಗಿದ್ದು, ಪಠ್ಯ ಪುಸ್ತಕದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡುವ ವಿಚಾರ ತರಬೇಕಾಗಿದೆ. ಜಾತಿ, ಧರ್ಮ ಬಿಟ್ಟು ಎಲ್ಲರೂ ಒಂದಾಗಿ ಜನಸಂಖ್ಯಾ ಸೋಟಕ್ಕೆ ನಿಯಂತ್ರಣ ಹಾಕಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಕಚೇರಿ ಮಂಗಳೂರು, ತಾಲೂಕು ಆರೋಗ್ಯಾಽಕಾರಿ ಕಚೇರಿ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ - ೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಡಿಮೆ ಜನಸಂಖ್ಯೆ ಇರುವ ಕೆಲವು ದೇಶ ಬಹಳಷ್ಟು ಮುಂದಿವೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಎಲ್ಲರೂ ನಗರಗಳತ್ತ ಸಾಗುತ್ತಿದ್ದು, ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ನಿವೇಶನ ರಹಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಿಗೆ ಹಕ್ಕುಗಳನ್ನು ಪಡೆದುಕೊಳ್ಳಲು ಕಷ್ಟವಾಗಬಹುದು. ಮೂಲಸೌಕರ್ಯಗಳನ್ನು ನೀಡಲು ಸರ್ಕಾರಗಳಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಮಿತಾ ನಾಯ್ಕ್ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಽಕಾರಿ ಡಾ. ಎಚ್.ಆರ್.ತಿಮ್ಮಯ್ಯ, ತಹಸೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಽಕಾರಿ ಎಸ್. ಆರ್. ಲೋಕೇಶ್, ಜಿಲ್ಲಾ ಕುಟುಂಬ ಕಲ್ಯಾಣ ಅಽಕಾರಿ ಡಾ. ದೀಪಾ ಪ್ರಭು, ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಜ್ಯೋತಿ ಉಳಿಪಾಡಿ, ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ, ತಾಲೂಕು ಆಸ್ಪತ್ರೆಯ ಡಾ. ಆಶಾ ಜ್ಯೋತಿ ಪುತ್ತೂರಾಯ ಉಪಸ್ಥಿತರಿದ್ದರು.


ತಾಲೂಕು ವೈದ್ಯಾಽಕಾರಿ ಡಾ.ದೀಪಕ್ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಹಿರಿಯ ಚಿಕಿತ್ಸಾ ಮೇಲ್ವಿಚಾರಕ ರವಿ ವಂದಿಸಿದರು. ಶಿಕ್ಷಕಿ ದೇವಕಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆರೋಗ್ಯ ಶಿಕ್ಷಣಾಽಕಾರಿ ಪದ್ಮಾವತಿ ಸಹಕರಿಸಿದರು.


ಗೌರವಾರ್ಪಣೆ
ಜನಸಂಖ್ಯೆಯ ನಿಯಂತ್ರಣದಲ್ಲಿ ಕೊಡುಗೆ ನೀಡಿದ ಎ.ಎನ್.ಎಂ. ಕುಸುಮಾ, ಆಶಾ ಕಾರ್ಯಕರ್ತೆ ನಳಿನಾಕ್ಷಿ ಅವರನ್ನು ಗುರುತಿಸಲಾಯಿತು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮ ಆರೋಗ್ಯ ಕೇಂದ್ರ ಪ್ರಶಸ್ತಿ ನೀಡಲಾಯಿತು. ರೀಲ್ಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಅನನ್ಯ ಪ್ರಥಮ ಸ್ಥಾನ, -ತಿಮಾ ತಂಡ ದ್ವಿತೀಯ ಸ್ಥಾನ, ಪ್ರತೀಶ್ ತಂಡ ತೃತೀಯ ಸ್ಥಾನ ಪಡೆಯಿತು.ಎನ್.ಎಸ್.ವಿ. ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದ ವಿದ್ಯಾ, ಅಕ್ಷತಾ, ನಂದಿನಿ, ವಿಜಯಲಕ್ಷ್ಮೀ, ತ್ರಿವೇಣಿ, ವೀಣಾ, ದಯಾಕಿರಣ, ದಮಯಂತಿ, ಉಷಾ, ಲೀನಾ, ಲಲಿತಾ, ರಶ್ಮಿ, ವಿಜಯಶ್ರೀ, ಚೇತನಾ, ಯಶೋಧರ ಅವರನ್ನು ಗೌರವಿಸಲಾಯಿತು.