ಜಿಲ್ಲೆ

ಜಮ್ಮು ಕಾಶ್ಮೀರದ ಆರ್ಟಿಕಲ್​ 370: ಅರ್ಜಿದಾರರಿಗೆ ಮುಖಭಂಗ: ರಾಘವೇಂದ್ರ ಯಳವತ್ತಿ

Gadag - Shivanand Hiremath

ಗದಗ: ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ಆರ್ಟಿಕಲ್​ 370 ಕಾಯ್ದೆ ರದ್ದುಪಡಿಸಿ ಭಾರತದ ಇತರೆ ರಾಜ್ಯಗಳಿಗೆ ಸಿಗುವ ಸೌಲಭ್ಯಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಸಿಗುವಂತೆ ಮಾಡಿದ್ದು ಐತಿಹಾಸಿಕ ದಿನವಾಗಿತ್ತು. ಆದರೆ, ಕೆಲವು ದುಷ್ಟ ಶಕ್ತಿಗಳನ್ನು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದವು. ಈಗ ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರದ ತೀರ್ಪನ್ನು ಎತ್ತಿ ಹಿಡಿದಿದ್ದು ಅರ್ಜಿದಾರರಿಗೆ ಭಾರಿ ಮುಖಭಂಗವಾಗಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಖ್ಯ ನ್ಯಾ. ಡಿ. ವೈ ಚಂದ್ರಚೂಡ್​ ಅವರು "ಸರ್ಕಾರದ ಆದೇಶವನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಸಂಸತ್​ ಮತ್ತು ರಾಷ್ಟ್ರಪತಿ ಈ ನಿರ್ಧಾರವನ್ನು ಕೈಗೊಳ್ಳಬಹುದು. ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿರುವಾಗ ರಾಷ್ಟ್ರಪತಿಗಳ ಅಧಿಕಾರಕ್ಕೂ ಮಿತಿಗಳು ಇರುತ್ತವೆ. ರಾಷ್ಟ್ರಪತಿ ಕೈಗೊಳ್ಳುವ ನಿರ್ಧಾರಗಳು ನ್ಯಾಯಾಂಗದ ಪರಾಮರ್ಶೆಗೆ ಒಳಪಡಿಲಿದೆ'' ಎಂದು ಮಹತ್ವದ ತೀರ್ಪನ್ನು ನೀಡಿದೆ. ಈ ಮಹತ್ವದ ತೀರ್ಪು ನೀಡಿದ್ದು ರಾಜ್ಯದ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸ್ಥಾಯಿ ಸಮಿತಿ ಅಧ್ಯ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಪ್ರಕಟಣೆ ತಿಳಿಸಿದ್ದಾರೆ.