ಮಡಿಕೇರಿ:
ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬAಧಿಸಿದ ವಿಧೇಯಕವನ್ನು ಗುರುವಾರ ಸದನದಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್Ä ಮಂಡಿಸಿದರು.
ಈ ವಿಧೇಯಕ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸ್ಪಷ್ಟನೆ ನೀಡಿ, ಈ ವಿಧೇಯಕ ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬAಧಸಿದ್ದಾಗಿದೆ. 1964ನೇ ಕರ್ನಾಟಕ ಕಂದಾಯ ಕಾನೂನಿನಲ್ಲಿ ಕೆಲವು ಅಂಶಗಳು ಕೊಡಗು ಜನರ ಸಮಸ್ಯೆಗೆ ಕಾರಣವಾಗಿದೆ. ಅತ್ಯಂತ ಜಟೀಲವಾದ ಸಮಸ್ಯೆಯಾಗಿರುವುದರಿಂದ ಇದನ್ನು ತಿದ್ದುಪಡಿ ಮಾಡುವುದು ಅವಶ್ಯಕವಾಗಿರುತ್ತದೆ.
ಆದುದರಿಂದ ವಿಧಾನಸಭೆಯ ಆಯ್ಕೆ ಸಮಿತಿ ರಚನೆ ಮಾಡುವಂತೆ ವಿಧಾನಸಭೆಯಲ್ಲಿ ವಿನಂತಿಸಿದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ವಿಧಾನಸಭೆ ಆಯ್ಕೆ ಸಮಿತಿ ರಚನೆ ಮಾಡಲು ಒಪ್ಪಿಗೆ ನೀಡಲಾಯಿತು.