ಜಿಲ್ಲೆ

ಇಂದು ಜಮಖಂಡಿ, ನಾಳೆ ಮುಧೋಳದಲ್ಲಿ ಶಾಖೆ ಉದ್ಘಾಟನೆ

ಸೋಮಲಿಂಗ ತಳವಾರ

ಗೋಕಾಕ: ದಿ. ಗೋಕಾಕ ಅರ್ಬನ್​ ಕೋ&ಆಪರೇಟಿವ್​ ಕ್ರೆಡಿಟ್​ ಬ್ಯಾಂಕ್​ 118 ವರ್ಷ ಪೂರೆಸಿ ಅಭಿವದ್ಧಿ ಪಥದತ್ತ ಮುನ್ನಡೆಯುತ್ತಿದೆ ಎಂದು ಬ್ಯಾಂಕ್​ನ ಹಿರಿಯ ನಿರ್ದೇಶಕ ಎಂ.ಡಿ.ಚುನಮರಿ ಹೇಳಿದರು.

ನಗರದ ದಿ. ಗೋಕಾಕ ಅರ್ಬನ್​ ಕೋ&ಆಪರೇಟಿವ್​ ಕ್ರೆಡಿಟ್​ ಬ್ಯಾಂಕ್​ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜ.1ರಂದು ಬ್ಯಾಂಕಿನ 7ನೇ ಶಾಖೆಯನ್ನು ಜಮಖಂಡಿ ಪಟ್ಟಣದಲ್ಲಿ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ 2ರಂದು ಬ್ಯಾಂಕ್​ನ 8ನೇ ಶಾಖೆಯನ್ನು ಮುಧೋಳ ಪಟ್ಟಣದಲ್ಲಿ ವೇದಮೂರ್ತಿ ಚಂದ್ರಶೇಖರ ಸ್ವಾಮೀಜಿ ಅಮತ ಹಸ್ತದಿಂದ ಉದ್ಘಾಟಿಸಲಾಗುತ್ತದೆ. ಸದ್ಯದಲ್ಲೇ ಬೆಳಗಾವಿ ನಗರದಲ್ಲಿಯೂ ಶಾಖೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಬ್ಯಾಂಕ್​ನ ಅಧ್ಯ ಬಸವರಾಜ ಕಲ್ಯಾಣಶೆಟ್ಟಿ , ಉಪಾಧ್ಯ ಸುಧೀರ ಅಂಕಲಿ, ನಿರ್ದೇಶಕರಾದ ಜಯಾನಂದ ಮುನವಳ್ಳಿ, ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಮಹಾಂತೇಶ ಕಲ್ಲೋಳಿ, ರಾಜಶೇಖರ ತಾರಳಿ, ಶಾಂತಾ ೂಡಗೇರಿ, ಚಂದ್ರಕಾಂತ ಕುರಬೇಟ, ಶ್ರೀಕಾಂತ ಪಟ್ಟಣಶೆಟ್ಟಿ ಹಾಗೂ ಪ್ರಧಾನ ವ್ಯವಸ್ಥಾಪಕ ಶಿವನಗೌಡ ಪಾಟೀಲ ಇದ್ದರು.