ಬಳ್ಳಾರಿಯ ಕೊಳಗೇರಿ ಮಂಡಳಿಯ ಎಇ ಕೃಷ್ಣಾ ರೆಡ್ಡಿ ಅಮಾನತು
ಬಳ್ಳಾರಿ: ನಗರದ ಮುಂಡರಗಿ ಆಶ್ರಯ ಕಾಲೋನಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಅರ್ಹರಿಗೆ ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ ನೀಡಿದರು.
ನಗರದ ಹೊರ ಹೊರ ವಲಯದ ಮುಂಡರಗಿ ಆಶ್ರಯ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿ, ಒಟ್ಟು ೫೬ ಎಕರೆಯಲ್ಲಿ ೩೬೫ ಕೋಟಿ ರೂ. ಗಳ ವೆಚ್ಚದಲ್ಲಿ ೫೬೧೬ ಮನೆಗಳ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುತ್ತಿದ್ದು, ಮೊದ ಹಂತದಲ್ಲಿ ೨೫೯೨ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲಿ ಈಗಾಗಲೇ ೩೬೫ ಮನೆಗಳು ಪೂರ್ಣಗೊಂಡಿದ್ದು, ೧೦೦೦ ಮನೆಗಳು ನಿರ್ಮಾಣ ಹಂತದಲ್ಲಿವೆ ಮತ್ತು ಉಳಿದಿರುವುಗಳದ್ದು ಅಡಿಪಾಯ ಆಗಿದೆ, ಪೂರ್ಣಗೊಂಡಿರುವ ಮನೆಗಳನ್ನು ಶೀಘ್ರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರದ ರಾಘವೇಂದ್ರ ಕಾಲೋನಿಯ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.
ಅಧಿಕಾರಿ ಅಮಾನತಿಗೆ ಆದೇಶ:
ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಭೇಟಿ ಸಂದರ್ಭದಲ್ಲಿ ಗೈರು ಹಾಜರಾದ ಬಳ್ಳಾರಿಯ ಕೊಳಗೇರಿ ಮಂಡಳಿಯ ಸಹಾಯಕ ಅಭಿಯಂತರ ಕೃಷ್ಣಾ ರೆಡ್ಡಿ ಅವರನ್ನು ಜಾರಿಗೆ ಬರುವಂತೆ ಅಮಾನತು ಮಾಡಲು ಸಚಿವರು ಸೂಚಿಸಿದರು. ಅದರಂತೆ ತಕ್ಷಣವೇ ಅಮಾನತು ಆದೇಶ ಸಹ ಹೊರಡಿಸಲಾಯಿತು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಸಚಿವ ಈ.ತುಕಾರಾಂ, ಶಾಸಕರಾದ ನಾರಾ ಭರತ್ ರೆಡ್ಡಿ, ಡಾ,.ಎನ್.ಟಿ.ಶ್ರೀನಿವಾಸ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.