raichur 
ಜಿಲ್ಲೆ

ಜಂಬೂಸವಾರಿ ಮಾದರಿ ಮುಂಗಾರು ಬೆಳ್ಳಿ ಹಬ್ಬಕ್ಕೆ ವೈಭವದ ಮೆರುಗು

ರಾಯಚೂರು ಮುಂಗಾರು ಬೆಳ್ಳಿ ಹಬ್ಬದ ಹಿನ್ನಲೆ ನಡೆದ ಮುನ್ನೂರು ಕಾಪು ಸಮಾಜದ ಭವ್ಯ ಮೆರವಣಿಗೆತಯು ಅದ್ದೂರಿಯಾಗಿ ಬುಧವಾರ ಸಂಜೆ ಜರುಗಿತು.

ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮುಂಗಾರು ಬೆಳ್ಳಿ ಹಬ್ಬದ ಮಾತ ಲಕ್ಷ್ಮಿ ದೇವಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಬಿಚ್ಚಾಲಿಯ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಚಿಕ್ಕಸೂಗೂರು ಚೌಕಿ ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಸೋಮವಾರಪೇಟೆ ಅಭಿನವ ರಾಚೋಟಿ ವೀರಶಿವಾಚಾರ್ಯ ಮಹಾಸ್ವಾಮಿಗಳು,ನವಲಕಲ್‌ನ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಹಬ್ಬದ ರೂವಾರಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ನಿವಾಸದಲ್ಲಿ ಮುನ್ನೂರು ಕಾಪು ಸಮಾಜದ ಕುಲದೇವತೆ ಶ್ರೀ ಮಾತಾ ಲಕ್ಷ್ಮಮ್ಮ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಎರಡನೇ ದಿನವಾದ ಇಂದು ಕಾರಹುಣ್ಣಿಮೆ ಅಂಗವಾಗಿ ನಡೆದ ಮೆರವಣಿಗೆಯನ್ನು ರಸ್ತೆ ಯುದ್ಧಕ್ಕೂ ಜನ ಸಾಗರವೇ ವೈಭವದ ಭವ್ಯ ಮೆರವಣಿಗೆಯನ್ನು ವೀಕ್ಷಿಸುತ್ತಿರುವ ನೋಟ ಮುನ್ನೂರು ಕಾಪು ಸಮಾಜದ ಪ್ರಾಬಲ್ಯ ಪ್ರದರ್ಶಿಸಿತು.

ಮೆರವಣಿಗೆಯ ಉದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಅಪಾರ ಸಂಖ್ಯೆಯ ಜನರು ನಿಂತುಕೊಂಡು ವೈಭವದ ಮೆರವಣಿಗೆಯನ್ನು ವೀಕ್ಷಿಸಿದರು.ಅನೇಕ ಜನರು ರಸ್ತೆ ಬದಿಯಲ್ಲಿರುವ ಕಟ್ಟಡ ಮನೆಯ ಮಹಡಿ ಮೇಲೆ ನಿಂತುಕೊಂಡು ಮೆರವಣಿಗೆಯನ್ನು ವೀಕ್ಷಿಸಿದರು. ಮೆರವಣಿಗೆಯು ಜನರ ಮನಸೂರೆಗೊಂಡಿತು. ಕಲಾ ತಂಡಗಳ ಜೊತೆಯಲ್ಲಿ ಜನರು ಫೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಮುನ್ನೂರುಕಾಪು ಸಮಾಜ ಅಧ್ಯಕ್ಷರಾದ ಬೆಲ್ಲಂ ನರಸರಡ್ಡಿ, ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಎನ್.ಶಂಕ್ರಪ್ಪ, ಜಯವಂತರಾವ್‌ಪತಂಗಿ, ರವೀಂದ್ರ ಜಾಲ್ದಾರ್ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಯುವಕರು ಸೇರಿದಂತೆ ಅನೇಕರು ಇದ್ದರು.