ಕದರೀಪುರ: ಕೋಲಾರ ತಾಲೂಕು ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಾಪುರ ಗ್ರಾಮದ ಸರ್ವೇ ನಂ.81ರಲ್ಲಿ 2.20ಎಕರೆ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿಟ್ಟಿದ್ದು, ಜಾಗದಲ್ಲಿ ಗಿಡ&ಗಂಟಿಗಳು ಬೆಳೆದಿದ್ದು, ನೀಲಗಿರಿ ಮರಗಳನ್ನು ತೆರವುಗೊಳಿಸಿ ಸುಗಮವಾಗಿ ಶವ ಸಂಸ್ಕಾರ ನೆರವೇರಿಸಿಸಲು ಸ್ವಚ್ಛತೆ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಓಡಾಡಲು ಹೆಜ್ಜೆ ಇಡಲು ಆಗದ ಪರಿಸ್ಥಿತಿ ಇದ್ದು, ನೀರಿನ ಸೌಲಭ್ಯ ಒದಗಿಸಿಕೊಡಲು ಸಂಬಂಧ ಪಟ್ಟ ಅಧಿಕಾರಿಗಳು ಆದ್ಯತೆ ನೀಡಬೇಕು. ಪುರಾತನ ಕಾಲದಿಂದಲೂ ಜಂಬಾಪುರ ಗ್ರಾಮಸ್ಥರು ಸಾರ್ವಜನಿಕ ಸ್ಮಶಾನವಾಗಿ ಸದರಿ ಸ್ಥಳದಲ್ಲಿ ಬಳಕೆ ಮಾಡಬರುತ್ತಿದ್ದುಮ ಸ್ಥಳದಲ್ಲಿ ಎಲ್ಲ ಜನಾಂಗದವರು ಶವ ಸಂಸ್ಕಾರ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಗೆ ಶವ ಹೂಳಲು ನೀಲಗಿರಿ ಮರಗಳು ಮುಳ್ಳು&ಗಿಡಗಳು ಹೆಮ್ಮರಗಳಾಗಿ ಬೆಳೆದು ನಿಂತಿದ್ದು, ತೆರವುಗೊಳಿಸಬೇಕು ಎಂದು ಮದ್ದೇರಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಪಿಎಲ್ಡಿ ಬ್ಯಾಂಕ್ ಉಪಾಧ್ಯ ಜಂಬಾಪುರ ವೆಂಕಟರಾಮ್ ಮನವಿ ಮಾಡಿದ್ದಾರೆ.