ಜಂಬಗಿ ಕೆರೆ ತುಂಬಿಸುವಂತೆ ರೈತರು ಪ್ರತಿಭಟನೆ ನಡೆಸಿದರು. ರಾಮಸಿಂಗ ರಜಪೂತ, ಚನ್ನಪ್ಪ ವಾಡೇದ, ಸಿದ್ದಪ್ಪ ಮಸೂತಿ, ಶರಣಪ್ಪ ಜಮಖಂಡಿ ಇತರರಿದ್ದರು. 
ಜಿಲ್ಲೆ

ಕಳೆದ 10 ವರ್ಷಗಳಿಂದ ಜಂಬಗಿ ಕೆರೆ ತುಂಬಿಲ್ಲ

ವಿಜಯಪುರ: ಜಂಬಗಿ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಕೆರೆಯಲ್ಲಿ ರೈತರು ನಡೆಸುತ್ತಿರುವ ಧರಣಿ ಭಾನುವಾರ ನಾಲ್ಕನೇ ದಿನ ಪೂರೈಸಿತು.

ಪ್ರಗತಿಪರ ರೈತ ರಾಮಸಿಂಗ ರಜಪೂತ ಮಾತನಾಡಿ, ಕಳೆದ 3 ದಿನಗಳಿಂದ ಜಂಬಗಿ ಕೆರೆ ತುಂಬಬೇಕೆಂದು ನಡೆಸುತ್ತಿರುವ ಅರ್ನಿದಿಷ್ಟ ಅವಧಿ ಧರಣಿ ಬಗ್ಗೆ ಹಲವು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡರೂ ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಈ ಬಗ್ಗೆ ಒಂದಿಷ್ಟು ತಲೆ ಕೆಡೆಸಿಕೊಳ್ಳದೆ ಸುಮ್ಮನಿದ್ದು ಮೂಕ ಜಾಣತನ ಪ್ರದರ್ಶಿಸುತ್ತಿದ್ದಾರೆ.

ನಾನು ಒಬ್ಬ ಸಾಮಾನ್ಯ ರೈತನಾಗಿದ್ದು ಕೃಷಿಯನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದೇನೆ. ದೊಡ್ಡ ಮಳೆಯಾದರೆ ಮಾತ್ರವೇ ಜಂಬಗಿ ಕೆರೆ ತುಂಬುತ್ತದೆ. ಆದರೆ, ಕಳೆದ 10 ವರ್ಷಗಳಿಂದ ಈ ಕೆರೆ ತುಂಬಿಲ್ಲ ಎಂದರು.

ಜಂಬಗಿ ಕೆರೆ ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳಾದ ಜಂಬಗಿ, ಹೊನ್ನಳ್ಳಿ, ಅಂಕಲಗಿ, ಸಿರಕನಹಳ್ಳಿ, ಆಹೇರಿ, ಮಾದಾಳ ಸೇರಿ ಹಲವು ಗ್ರಾಮಗಳ ಅನೇಕ ರೈತರಿಗೆ ಅನುಕೂಲವಾಗಲಿದೆ.

ಭೂಮಿಯ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆಬಾವಿ, ಬಾವಿಯಲ್ಲಿಯ ನೀರು ಜಿನುಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕೆರೆಗೆ ನೀರು ತುಂಬಿ ಶಾಶ್ವತ ಪರಿಹಾರ ರೂಪಿಸಬೇಕು.

ನೀರು ತುಂಬಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲದಿದ್ದಲ್ಲಿ ನಮ್ಮ ಜಾನುವಾರುಗಳನ್ನು ಹೊಡೆದುಕೊಂಡು ಡಿಸಿ ಕಚೇರಿಗೆ ಆಗಮಿಸುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯ ಜಯಸಿಂಗ ರಜಪೂತ, ಚನ್ನಪ್ಪ ವಾಡೇದ, ಸಿದ್ದಪ್ಪ ಮಸೂತಿ, ಶರಣಪ್ಪ ಜಮಖಂಡಿ, ಅನಮೇಶ ಜಮಖಂಡಿ, ರಾಜಾರಾಮಸಿಂಗ ಡೋಣೂರ, ಮುತ್ತಪ್ಪ ನಾಯ್ಕೋಡಿ, ಕಿಸಾನಸಿಂಗ ರಜಪೂತ, ಶ್ರೀಶೈಲ ಮಸೂತಿ, ಭೀಮರಾಯ ಹಚಡದ, ಸಂಗಮೇಶ ಗುದಳೆ, ಲಾಳೇಮಶಾಕ ಮುಲ್ಲಾ, ಮಾಳಪ್ಪ ಪೂಜಾರಿ, ಅಶೋಕಸಿಂಗ ರಜಪೂತ, ಬಸವರಾಜ ಮಾದರ, ಭೀರಪ್ಪ ಗೇರಡೆ, ಭೀಮರಾಯ ಗೊರನಾಳ ಇತರರಿದ್ದರು.