ಜಿಲ್ಲೆ

ಎಪಿಎಂಸಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಜಮಖಂಡಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಸಾಲಟ್ಟಿ ಗ್ರಾಮದ ಸಂಜಯ ಸತ್ಯಪ್ಪ ಸಿದ್ದಾಪೂರ ಹಾಗೂ ಉಪಾಧ್ಯಕ್ಷರಾಗಿ ಶಿರಗುಪ್ಪಿ ಗ್ರಾಮದ ರುದ್ರವ್ವಾ ಮಲ್ಲಪ್ಪ ಮಂಟೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಒಟ್ಟು 15 ಸದಸ್ಯರ ಪೈಕಿ 11 ಜನ ಸದಸ್ಯರು ಹಾಜರಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡೆ ನಾಮ ಪತ್ರ ಹೊರತು ಪಡಿಸಿ ಯಾರು ನಾಮ ಪತ್ರ ಸಲ್ಲಿಸದೆ ಇರುವದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ತಹಸೀಲ್ದಾರ ಸಂಜಯ ಇಂಗಳೆ ಅವರು ಘೋಷಿಸಿದರು.

ನೂತನ ಅಧ್ಯಕ್ಷ ಉಪಾಧ್ಯಕ್ಷೆಯನ್ನು ತೇರದಾಳ ಶಾಸಕ ಸಿದ್ದು ಸವದಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಪಿ.ಆರ್.ಪಾಲಬಾವಿ, ಡಿ.ಆರ್.ಪಾಟೀಲ, ದೇವಲ ದೇಸಾಯಿ, ಸದಸ್ಯರಾದ ಮಹಾದೇವ ಶಾಂತು ದೈಗೊಂಡ, ಪ್ರದೀಪ ನಂ. ನಂದೆಪ್ಪನವರ, ವರ್ಧಮಾನ ಭೂ. ಕಡಹಟ್ಟಿ, ತುಕಾರಾಮ ತ. ಬಾಪಕರ, ಮಲ್ಲಪ್ಪ ಬಸಪ್ಪ ಜಕ್ಕನೂರ, ಸಹದೇವ ಭೀ ಕಾಂಬಳೆ, ಪರಪ್ಪ ಲಕ್ಷತ್ಮಣ ಮುಧೋಳ, ಹಣಮಂತ ರಾ ಸಿದಗೋಣಿ, ದ್ರಾಕ್ಷಾಯಿಣಿ ಅ. ಸಬಲಣ್ಣವರ, ಮುಖಂಡರಾದ ಶಂಕರ ಹುನ್ನೂರ, ಪ್ರಕಾಶ ಮಾನಶೆಟ್ಟಿ, ಮಲ್ಲಪ್ಪ ಗುರವ, ವರ್ದಮಾನ ಕೋರೆ ಇದ್ದರು.

EndFragment