ಮಹಾಲಿಂಗಪುರ: ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಿದ್ಧಾರೂಢರ 94ನೇ ಪುಣ್ಯಾರಾಧನೆಯ ನಿಮಿತ್ತ ಸಿದ್ಧಾಯಿ ಸರೋವರ ಕೆರೆಯಲ್ಲಿ 41ನೇ ವರ್ಷದ ಜಲರಥೋತ್ಸವ(ತೆಪ್ಪೋತ್ಸವ) ಶುಕ್ರವಾರ ಜರುಗಿತು.
ಅಲಂಕೃತ ರಥದಲ್ಲಿನ ಸಿದ್ಧಾರೂಢರ ಮೂರ್ತಿಗೆ ಪುರಸಭೆ ಸದಸ್ಯ ರವಿ ಜವಳಗಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ತೆಪ್ಪೋತ್ಸವದ ನಿಮಿತ್ತ ಬೆಳಗ್ಗೆ 8 ಗಂಟೆಗೆ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ, 10 ಗಂಟೆಗೆ ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರಿಂದ ಮುತ್ತೈದೆಯರಿಗೆ ಉಡಿ ತುಂಬುವುದು, ನಂತರ ವಿವಿಧ ಗ್ರಾಮಗಳ ಭಜನಾಮೇಳದವರಿಂದ ಭಜನಾ ಕಾರ್ಯಕ್ರಮ ಜರುಗಿದವು.
ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ, ಘಟಪ್ರಭಾ ಭೀಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ, ಖಜ್ಜಿಡೋಣ ಕೃಷ್ಣಾನಂದ ಶಾಸಿಗಳು, ರನ್ನಬೆಳಗಲಿ ಸದಾಶಿವ ಗುರೂಜಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿತಾಯಿ, ಮತ್ತಿಕಟ್ಟಿಯ ರಾಜೇಶ್ವರಿ ತಾಯಿ, ನಿರ್ವಾನಟ್ಟಿಯ ವಿದ್ಯಾನಂದ ಸ್ವಾಮೀಜಿ, ಹೊಸೂರ ಪರಮಾನಂದ ಸ್ವಾಮೀಜಿ, ಕಂಕನವಾಡಿ ಮಾರುತಿ ಶರಣರು, ಹಿಪ್ಪರಗಿ ಸಿದ್ಧಾರೂಢ ಶರಣರು, ಮಧುರಖಂಡಿಯ ಬಸಯ್ಯಸ್ವಾಮೀಜಿ ಭಾಗವಹಿಸಿದ್ದರು.
ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯ ತೆಪ್ಪೋತ್ಸವದ ನಂತರ ಉತ್ತರ ಕರ್ನಾಟಕದಲ್ಲಿ ಜರುಗುವ ಎರಡನೇ ದೊಡ್ಡ ತೆಪ್ಪೋತ್ಸವ ( ಜಲರಥೋತ್ಸವ) ಇದಾಗಿದೆ. ತೆಪ್ಪೋತ್ಸವ ವೀಕ್ಷಣೆಗಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಭಕ್ತರು ಆಗಮಿಸಿದ್ದರು.
ಸಿದ್ಧಾರೂಢ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಡಾ.ಬಿ.ಡಿ.ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾಂವಿ, ಸಹಕಾರ್ಯದರ್ಶಿ ಗುರುಪಾದ ಅಂಬಿ, ಧರ್ಮದರ್ಶಿಗಳಾದ ಮಲ್ಲಪ್ಪ ಕಟಗಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಚೇತನ ಹಾದಿಮನಿ, ಶ್ರೀಮಠದ ಭಕ್ತರಾದ ಮಹಾಂತೇಶ ಘಟ್ನಟ್ಟಿ, ಮಹೇಶ ಇಟಕನ್ನವರ, ಯಲ್ಲನಗೌಡ ಪಾಟೀಲ, ಎಸ್.ಕೆ.ಗಿಂಡೆ, ಮಹಾಲಿಂಗ ಕರೆಹೊನ್ನ, ಚನಬಸು ಹುರಕಡ್ಲಿ, ಚನ್ನಪ್ಪ ಚಂಡೋಲ, ಸುಭಾಸ ನಾಯಕ, ಮಹೇಶ ಬಡಿಗೇರ, ಶಿವಲಿಂಗ ತೇಲಿ, ಶಿವಾನಂದ ಬಡಿಗೇರ, ಕಲ್ಮೇಶ ಕುಂಬಾರ, ಹನುಮಂತ ಹೂಗಾರ, ಮಲ್ಲಪ್ಪ ರಡ್ಡಿ, ಕುಮಾರ ಉಳ್ಳಾಗಡ್ಡಿ, ಸಿದ್ರಾಮಯ್ಯ ಗೋಠೆ, ಸದಾಶಿವ ಇಂಗಳಗಿ, ಸುರೇಶ ಕೆಂಪವಾಡ, ಪರಮಾನಂದ ಹಂಚಿನಾಳ, ಶಂಕರಗೌಡ ಪಾಟೀಲ, ಶ್ರೀಕಾಂತ ಮುಕರೆ, ಮಹಾಲಿಂಗ ಜಿಟ್ಟಿ, ಸುರೇಶ ಕೋಲಾರ, ಸಿದ್ದು ಧಡೂತಿ ಇತರರಿದ್ದರು.