ಜಿಲ್ಲೆ

ಜಯಘೊಷಗಳ ಮಧ್ಯೆ ಸಿದ್ಧಾರೂಢರ ಜಲರಥೋತ್ಸವ

ಹುಬ್ಬಳ್ಳಿ: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಶುಕ್ರವಾರ ಭಕ್ತರ ಜಯಘೊಷಗಳ ಮಧ್ಯೆ ಶ್ರೀ ಸಿದ್ಧಾರೂಢರ ಜಲರಥೋತ್ಸವ (ತೆಪ್ಪದ ತೇರು) ವಿಜೃಂಭಣೆಯಿಂದ ಜರುಗಿತು.

ಕಲ್ಯಾಣಿಯ ಸುತ್ತಲೂ ನಿಂತಿದ್ದ ಸಾವಿರಾರು ಭಕ್ತರು, ಜಲರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ‘ಓಂ ನಮಃ ಶಿವಾಯ’, ‘ಸಿದ್ಧಾರೂಢ ಮಹಾರಾಜ ಕೀ ಜೈ’, ‘ಶ್ರೀ ಗುರುನಾಥಾರೂಢ ಮಹಾರಾಜ ಕೀ ಜೈ’, ‘ಹರ ಹರ ಮಹಾದೇವ’... ಎಂಬ ಜಯಘೊಷ ಮೊಳಗಿಸಿದರು. ಜಲರಥೋತ್ಸವಕ್ಕೆ ಗೋವಾ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಬೆಳಗ್ಗೆಯಿಂದಲೇ ಶ್ರೀ ಸಿದ್ಧಾರೂಢ ಸ್ವಾಮಿ ಹಾಗೂ ಶ್ರೀ ಗುರುನಾಥಾರೂಢ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಶ್ರೀಮಠದಿಂದ ಪಲ್ಲಕ್ಕಿ ಉತ್ಸವ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸಿದ ನಂತರ ಜಲರಥೋತ್ಸವ ಆರಂಭಗೊಂಡಿತು.

ಶ್ರೀಮಠದ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಜಿ. ಶಾಂತಿ, ನ್ಯಾಯಾಧೀಶರಾದ ಜಿ. ಪರಮೇಶ್ವರ ಪ್ರಸನ್ನ, ರಾಜೇಶ ಚಿಣ್ಣನವರ, ಗಣಪತಿ ಪ್ರಶಾಂತ, ರಾಜಶೇಖರ ತಿಲಗಂಜಿ, ನಾಗೇಶ ಎನ್, ಪದ್ಮಶ್ರೀ ಪಾಟೀಲ, ರಕ್ಷಿತಾ ಎಸ್., ತೇಜಸ್​ಕುಮಾರ, ಕರಣಸಿಂಗ್, ಶ್ವೇತಾ ಪಾಟೀಲ, ಟ್ರಸ್ಟ್ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ವೈಸ್ ಚೇರ್ಮನ್ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಶಾಮಾನಂದ ಪೂಜೇರಿ, ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಚನ್ನವೀರ ಮುಂಗರವಾಡಿ, ಇತರರು ಇದ್ದರು.