ಕಲಕೇರಿ ಸಮೀಪದ ಜಲಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿ ಕೆರೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಜಲಪುರ ಕೆರೆ ಹಸ್ತಾಂತರ ಕಾರ್ಯಕ್ರಮ

Vijayapura - Desk - Gurappa Lokuri

ಕಲಕೇರಿ: ಸಮೀಪದ ಜಲಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳದ ಆರ್ಥಿಕ ಸಹಕಾರದೊಂದಿಗೆ ಅಂದಾಜು 11.40 ಲಕ್ಷ ರೂಗಳಲ್ಲಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಲಾಯಿತು.

ಬೆಕಿನಾಳ ಗ್ರಾಪಂ ಹಾಗೂ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಡೆದ ಕೆರೆ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾಲಿಂಗೇಶ್ವರಮಠದ ಟೋಪಯ್ಯ ಮುತ್ಯಾ ವಹಿಸಿದ್ದರು.

ಯೋಜನೆಯ ನಾಮಲಕ ಅನಾವರಣಗೊಳಿಸುವ ಮೂಲಕ ಎಸ್. ಎಸ್. ಪಾಟೀಲ ಅಸ್ಕಿ ಕಾರ್ಯಕ್ರಮ ಉದ್ಘಾಟಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ್‌ಕುಮಾರ್ ಕೆರೆ ಹಸ್ತಾಂತರದ ಪ್ರಮಾಣ ಪತ್ರ ವಿತರಿಸಿದರು.

ಕೆರೆ ಸಮಿತಿ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ರವೀಂದ್ರ ಸುಧಾಕರ, ಯೋಜನಾಧಿಕಾರಿ ಕೃಷ್ಣಮೂರ್ತಿ, ಕೆರೆ ಇಂಜಿನಿಯರ್ ನಿಂಗರೆಡ್ಡಿ, ಸಮಿತಿ ಸದಸ್ಯರು, ಗ್ರಾಮಸ್ಥರು, ಸಂಘದ ಸದಸ್ಯರು, ಕೈಷಿ ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಇದ್ದರು.