ಆನಂದಪುರ: ನಾಡಿನಲ್ಲಿ ಸಾಕಷ್ಟು ಮಳೆ ಸುರಿದು ಸಮೃದ್ಧಿ ಉಂಟಾಗಲಿ ಎಂದು ಪ್ರಾರ್ಥಿಸಿ ಸಮೀಪದ ಸಿದ್ದೇಶ್ವರ ಕಾಲನಿಯ ಶ್ರೀಕಾಂತಿ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಜಲಾಭಿಷೇಕ ನಡೆಸಲಾಯಿತು.
ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಪುರುಷರು ಸೇರಿ 121 ಕೊಡಗಳಿಂದ ಜಲಾಭಿಷೇಕ ನಡೆಸಿದರು. ಬೆಳಗ್ಗೆ ದೇವರಿಗೆ ಪೂಜೆ ಮತ್ತು ಅಭಿಷೇಕ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 400ಕ್ಕೂ ಅಽಕ ಭಕ್ತರು ಆಗಮಿಸಿ ಸರತಿಯಲ್ಲಿ ನಿಂತು ಜಲಾಭಿಷೇಕ ನಡೆಸಿದರು. ನಂತರ ರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರಿತು.