ಮುಂಡರಗಿ: ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ ಜೈನ ಮುನಿ ಹತ್ಯೆ ಖಂಡಿಸಿ ತಾಲೂಕು ಜೈನ ಸಮಾಜದ ವತಿಯಿಂದ ಶುಕ್ರವಾರ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಜೈನ ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿ ಪವನ ಚೋಪ್ರಾ ಮಾತನಾಡಿ, ಕಾಮಕುಮಾರ ನಂದಿ ಮುನಿಮಹಾರಾಜರ ಹತ್ಯೆ ತೀವ್ರ ಖಂಡನೀಯ. ಜೈನಮುನಿಗಳು ತಪಸ್ವಿಗಳು, ಅಹಿಂಸಾ ಪರಮೋಧರ್ಮ ನಂಬಿ ಜೀವನ ನಡೆಸುವ ತ್ಯಾಗಿಗಳು, ಇಂಥ ಮುನಿಗಳನ್ನು ಕ್ರೂರವಾಗಿ ಹತ್ಯೆ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಅಡಿವೆಪ್ಪ ಚಲವಾದಿ ಮಾತನಾಡಿ, ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐ ವಿಚಾರಣೆಗೆ ವಹಿಸಿಕೊಡಬೇಕು. ಜೈನ ಮುನಿಗಳಿಗೆ ರಕ್ಷಣೆ ಒದಗಿಸಬೇಕು ಎಂದರು. ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಅವರು ಮನವಿ ಸ್ವೀಕರಿಸಿದರು.
ಗೌತಮಚಂದ್ ಚೋಪ್ರಾ, ಬಾಬುರಾವ್ ಜೈನ್, ಬಾಬುಲಾಲ್ ಜೈನ್, ಹೀರಾಲಾಲ್ ಜೈನ್, ರತನ್‌ಲಾಲ ತಾತಡ್, ವಿಕ್ರಮ್ ಜೈನ್, ಸುರೇಶ ಜೈನ್, ಎ.ಕೆ. ಜೈನ್, ಎ.ಟಿ. ಅಂಗಡಿ, ಪಿ.ಎಚ್. ಸೊಲಂಕಿ, ಜಿ.ಪಿ. ಮೆಹತಾ, ಎ.ಎಸ್. ಕೊದಾನಪುರ, ಪಿ.ಎಸ್. ಪಾಟೀಲ, ಜೆ.ಎಚ್. ಬನಸಾಲಿ, ಎಂ.ಎನ್. ತಾವನಪ್ಪನವರ, ಮಹಾವೀರ ಕೊದಾನಪುರ, ಅಶೋಕ ಭಾನೂರ, ಎಸ್.ಆರ್. ಜೈನ್, ಹಸನ್ ಅಳವಂಡಿ, ಇತರರಿದ್ದರು.