ಜಿಲ್ಲೆ

ಸಾಹಿತ್ಯಕ್ಕೆ ಜೈನ ಧರ್ಮದ ಕೊಡುಗೆ ಅನನ್ಯ

ಮಂಜುನಾಥ ಅಂಗಡಿ

ಧಾರವಾಡ: ಜೈನ ಧರ್ಮ ಅತ್ಯಂತ ಪ್ರಾಚೀನ ಧರ್ಮ. ಅಹಿಂಸೆಯ ತಳಹದಿಯ ಮೇಲೆ ಸ್ಥಾಪಿತವಾಗಿರುವ ಧರ್ಮ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಶಾಂತಿ ಪ್ರಿಯರಾದ ಜೈನರಿಗೆ ದಶಲಕ್ಷಣ ಪರ್ವ ಅತ್ಯಂತ ಶ್ರೇಷ್ಠ ಹಬ್ಬ ಎಂದು ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಹೇಳಿದರು.
ನಗರದ ಸನ್ಮತಿ ಜಿನಮಂದಿರದಲ್ಲಿ ವಿವಿಧ ಜೈನ ಸಂಘಟನೆಗಳ ಆಶ್ರಯದಲ್ಲಿ ಆರಂಭವಾದ ದಶಲಕ್ಷಣ ಪರ್ವ ಹಾಗೂ ಜೈನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದಶಲಕ್ಷಣ ಅಧ್ಯಾತ್ಮಿಕ ಪರ್ವವಾಗಿದ್ದು, ನಮ್ಮ ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ಧಗೊಳಿಸುವ ಹಬ್ಬ. ವರ್ತನೆಯಲ್ಲಿ ಪರಿವರ್ತನೆ ಮಾಡುವ ಪರ್ವ. ವಿಕಾರ ಭಾವನೆಗಳನ್ನು ತ್ಯಜಿಸಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೆ ಈ ಪರ್ವದ ಮೂಲ ಉದ್ದೇಶ ಎಂದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಅಮಿತಂಜನ ಕೀರ್ತಿ ಮುನಿ ಮಹಾರಾಜರು ಆಶಿರ್ವಚನ ನೀಡಿ, ಕ್ರೋಧ, ಕೋಪ- ತಾಪ, ಒರಟುತನ ಬಿಟ್ಟು ಸರಳ, ಸಭ್ಯ, ಸಾತ್ವಿಕನಾಗಿ ಬಾಳುವುದೇ ಕ್ಷಮಾ ಧರ್ಮ. ಕ್ಷಮೆಯು ಅಂತರAಗದ ಸ್ವಭಾವ. ಅಹಿಂಸೆಯ ಹೆಗ್ಗುರುತು. ಇಂತಹ ಸೌಮ್ಯ ಗುಣವನ್ನು ಬೆಳೆಸಿಕೊಡು ಬಾಳುವುದೆ ಉತ್ತಮ ಕ್ಷಮಾ ಧರ್ಮ. ಪರಮೋತ್ಕೃಷ್ಟ ಕ್ಷಮಾಗುಣವಿಲ್ಲದಿದ್ದರೆ, ಇತರ ಗುಣಗಳು ನಿಷ್ಪ ್ರಯೋಜನಗಳಾಗಿರುತ್ತವೆ ಎಂದರು.
ಸನ್ಮತಿ ಸೇವಾ ಸಮಾಜದ ಅಶೋಕ ಬಾಗಿ ಅಧ್ಯಕ್ಷತೆ ವಹಿಸಿದ್ದರು. ಚಾರುದತ್ತ ಬಾಗಿ, ಸುಮನ ವಜ್ರಕುಮಾರ, ಇತರರಿದ್ದರು. ಮಹಾವೀರ ಉಪಾಧ್ಯೆ ನಿರೂಪಿಸಿದರು.