ಜಿಲ್ಲೆ

ಜೈನ ಧರ್ಮದ ಸಿದ್ಧಾಂತ ಸಮಾಜಕ್ಕೆ ಮಾದರಿ

ಚಿಕ್ಕೋಡಿ: ಜೈನ ಧರ್ಮದ ತತ್ತ್ವ -ಸಿದ್ಧಾಂತ ಇಡೀ ಸಮಾಜಕ್ಕೆ ಅನುಕರನೀಯವಾಗಿವೆ. ಅನೇಕ ಮುನಿ, ಸಂತರು ತಪಸ್ಸು , ತ್ಯಾಗದಿಂದ

ಈ ಧರ್ಮವು ಶ್ರೇಷ್ಠವಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅಭಿಪ್ರಾಯಪಟ್ಟರು.

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಸಿದ್ದಸೇನ ಮುನಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಚಕ್ರ ವಿಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚಾತುರ್ಮಾಸ ಆಚರಣೆಗಾಗಿ ಸುಮಾರು ನಾಲ್ಕು ತಿಂಗಳಿನಿಂದ ಇಲ್ಲಿ ನೆಲೆಸಿರುವ ಡಾ.ಸಿದ್ಧಸೇನೆ ಮುನಿ ಮಹಾರಾಜರು ಗ್ರಾಮದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ, ವಿಧಿ ವಿಧಾನ, ಸಮಾವೇಶ, ಪ್ರವಚನ, ಯುವಕರಿಗೆ ಮಾರ್ಗದರ್ಶನ ಮಾಡುವ ಮೂಲಕ ಜನರಲ್ಲಿ ಸದವಿಚಾರ ಬಿತ್ತಿದ್ದಾರೆ. ಇವರ ಪ್ರಯತ್ನದಿಂದ ಗ್ರಾಮವು ಧರ್ಮ ಗ್ರಾಮವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ಧಸೇನ ಮುನಿ ಮಹಾರಾಜರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಕಳಶ ಸ್ಥಾಪನೆ ಸವಾಲ ಜರುಗಿತು. ಶರತ ಪಾಟೀಲ, ಸಂಜಯ ಪಾಟೀಲ,ಕುಮಾರ ಕಾಗವಾಡೆ ಇತರರಿದ್ದರು.