ಭೋಜ ಪಂಚಕಲ್ಯಾಣ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. 108ಶ್ರೀ ಪ್ರಜ್ಞಾಸಾಗರ ಮುನಿ ಮಹಾರಾಜರು, ಉತ್ತಮ ಪಾಟೀಲ, ಸಚಿನ, ಸುಹಾಸ ಚೌಗುಲೆ, ರಾಜು ಕಡೋಲೆ, ತಾತ್ಯಾಸಾಹೇಬ ಪಾಟೀಲ, ಅದಗೊಂಡ ಪಾಟೀಲ, ರಾಜೇಶ ಪಾಟೀಲ, ಸಂದೀಪ ಪಾಟೀಲ ಹಾಗೂ ಇತರರು ಇದ್ದರು. 
ಜಿಲ್ಲೆ

ಜೈನ ಸಮುದಾಯ ಮಾದರಿ

ಬೋರಗಾಂವ: ಅಹಿಂಸಾ ಮೂಲದಿಂದ ಬಂದ ಜೈನ ಸಮುದಾಯವು ಎಲ್ಲ ಧರ್ಮಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ
ಸಚಿವ ರಮೇಶ ಜಾರಕಿಹೋಳಿ ಹೇಳಿದ್ದಾರೆ.

ಸಮೀಪದ ಭೋಜ ಗ್ರಾಮದಲ್ಲಿ ನಡೆಯುತ್ತಿರುವ ಆದರ್ಶ ಪಂಚಕಲ್ಯಾಣ ಮಹಾಮಹೋತ್ಸವ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ತಪೋಭೂಮಿ ಪ್ರಣೀತರು, 108 ಶ್ರೀ ಪ್ರಜ್ಞಾಸಾಗರ ಮುನಿ ಮಹಾರಾಜರ ಆಶೀರ್ವಾದ ಪಡೆದು ಮಾತನಾಡಿದರು. ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಮುಖಂಡ ಉತ್ತಮ ಪಾಟೀಲ, ಸಚಿನ ಕೆ., ಸುಹಾಸ ಚೌಗುಲೆ, ರಾಜು ಕಡೋಲೆ, ತಾತ್ಯಾಸಾಹೇಬ ಪಾಟೀಲ, ಅದಗೊಂಡ, ಪಾಟೀಲ, ರಾಜೇಶ ಪಾಟೀಲ, ಸಂದೀಪ ಪಾಟೀಲ, ಅಭಿನಂದನ ಪಾಟೀಲ, ಲಕ್ಷ್ಮಣ ಹಿಂದಳಕರ, ಹೊನಗೊಂಡ ಪಾಟೀಲ, ಭರತ ಕುಪಾನಟ್ಟೆ, ಕೀರ್ತಿ ಪಾಟೀಲ, ಅಪ್ಪಾಸಾಹೇಬ ಪಾಟೀಲ, ಪ್ರಶಾಂತ ಪಾಟೀಲ, ರಜನಿಕಾಂತ ಚೌಗುಲೆ, ಜಿವಂದರ ಫಿರಗಣ್ಣವರ, ಮಲಗೊಂಡ ಪಾಟೀಲ, ಜನಗೊಂಡ ಪಾಟೀಲ ಇದ್ದರು.