ಬೆಳಗಾವಿ : ಜಿಲ್ಲೆಯ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಜೈನಮುನಿಗಳ ಡೈರಿ ರಹಸ್ಯವನ್ನು ಚಿಕ್ಕೋಡಿ ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ.
ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನಾರಾಯಣ ಮಾಳಿ ಹಾಗೂ ಇನ್ನೋರ್ವ ಆರೋಪಿ ಹಸನ್ ದಲಾಯತ್ ಈ ಇಬ್ಬರನ್ನು ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬರುವ ಜುಲೈ 17ರ ವರೆಗೆ ಇಬ್ಬರು ಈ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿರುವ ಹಿನ್ನೆಲೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಜೈನ್ ಮುನಿಯ ಹತ್ಯೆ ಮಾಡಿ ದ್ವಿಚಕ್ರ ವಾಹನ ಮೇಲೆ ಮೃತದೇಹವನ್ನು ಸಾಗಿಸಿರುವ ಬೈಕ್ನನ್ನು ಹಾಗೂ ಹಲವು ತಾಂತ್ರಿಕ ಸಾಕ್ಷಿಗಳನ್ನು ಕೂಡಾ ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ ಹತ್ಯೆಗೀಡಾಗಿರುವ ಜೈನಮುನಿಗಳ ಪರ್ಸನಲ್ ಡೈರಿ ಸುಟ್ಟು ಹಾಕಿದ್ದ ಸ್ಥಳವನ್ನು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸುಟ್ಟು ಹಾಕಲಾಗಿರುವ ಮುನಿಗಳ ಡೈರಿಯ ಬೂದಿ ಎಫ್‌ಎಸ್‌ಎಲ್‌ಗೆ ರವಾನಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲು ಸಿದ್ಧತೆ ಮಾಡಲಾಗಿದೆ.
ಜೈನಮುನಿಗಳು ಬಳಸುತ್ತಿದ್ದ ಎರಡು ಮೊಬೈಲ್, ಇಬ್ಬರು ಆರೋಪಿಗಳ ತಲಾ ಒಂದು ಹೀಗೆ ಒಟ್ಟು ನಾಲ್ಕು ಮೊಬೈಲ್ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿದಿದೆ. ಮೊಬೈಲ್‌ನಲ್ಲಿ ಏನಾದರೂ ಸಾಕ್ಷ್ಯ ಇದೆಯಾ? ಯಾವಾಗೆಲ್ಲ ಕರೆ ಮಾಡಿದ್ರು ಎಂಬ ಎಲ್ಲ ಮಾಹಿತಿ ಬಗ್ಗೆ ಪಿನ್ ಟು ಪಿನ್ ಮಾಹಿತಿ ಪಡೆಯುತ್ತಿರುವ ಪೊಲೀಸರು, ಹಣಕಾಸಿನ ವ್ಯವಹಾರ, ಸಾಮಾಜಿಕ ಜಾಲತಾಣ ಬಳಕೆ ಹಾಗೂ ಕಾಲ್ ರೆಕಾರ್ಡ್, ಪೋಟೋ, ವಿಡಿಯೋ ಪತ್ತೆಗಾಗಿ ರವಾನೆ ಮಾಡಲಾಗುತ್ತಿದೆ. ಗುರುವಾರ ಮೂರನೇ ದಿನವೂ ಚಿಕ್ಕೋಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ನಿನ್ನೆ ಇಡೀ ದಿನ ಆರೋಪಿಗಳ ಕರೆದೊಯ್ದು ಸ್ಥಳ ಮಹಜರು ಮಾಡಿರುವ ಪೊಲೀಸರು. ನಿನ್ನೆ ಇಡೀ ದಿನ ಘಟನೆ ನಡೆದ ಸ್ಥಳ, ಮೃತದೇಹ ರವಾನಿಸಿದ ಮಾರ್ಗ ಪರಿಶೀಲನೆ ನಡೆಸಿದ್ದಾರೆ. ಜೈನಮುನಿಗಳ ದೇಹ ತುಂಡರಿಸಿದ ಸ್ಥಳ, ಕಟಕಬಾವಿಯ ಕೊಳವೆಬಾವಿ ಇದ್ದ ಗದ್ದೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಸುಟ್ಟು ಹಾಕಿದ ಡೈರಿಯಲ್ಲಿ ಏನಿತ್ತು ಎಂಬ ಬಗ್ಗೆ ಬಾಯಿಬಿಡದ ಎ1 ಆರೋಪಿ ನಾರಾಯಣ್. 35 ಕಿಲೋಮೀಟರ್ ರಸ್ತೆ ಮಾರ್ಗದಲ್ಲಿ ಇರೋ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಲಾಗುತ್ತಿದೆ. ಹಂತಕರು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದಾರಾ ಎಂಬ ಸಾಕ್ಷ್ಯ ಪೊಲೀಸರು ಕಲೆ ಹಾಕುತ್ತಿದ್ದಾರೆ.