ಜಿಲ್ಲೆ

ಜೈನ ಸಮುದಾಯ ಅಭಿವೃದ್ಧಿಗೆ ಶ್ರಮ

ಪ್ರಶಾಂತ ಹೂಗಾರ

ಬೋರಗಾಂವ: ದಿ.ರಾವಸಾಹೇಬ ಪಾಟೀಲ ಅವರ ಆಶೀರ್ವಾದ ಮತ್ತು ಸಹೋದ್ಯೋಗಿಗಳ ಪ್ರಯತ್ನದಿಂದ ದಕ್ಷಿಣ ಭಾರತ ಜೈನ ಸಭಾದ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ಉದ್ಯಮಿ ಅಭಿನಂದನ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಂಗಣದಲ್ಲಿ ಗುರುವಾರ ದಕ್ಷಿಣ ಭಾರತ ಜೈನ ಸಭಾದ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿವಾನ ಬಹದ್ದೂರ್ ಲಠ್ಠೆ ಮತ್ತು ವೀರಾಚಾರ್ಯ ಕುಚನುರೆ ಅವರಂತೆ ಗ್ರಾಮೀಣ ಪ್ರದೇಶಗಳಲ್ಲಿ ಜೈನ ಸಮುದಾಯದೊಂದಿಗೆ ಸಾಮರಸ್ಯದಿಂದ ವರ್ತಿಸುವುದು ಮತ್ತು ಒಂದೇ ಛಾವಣಿಯಡಿ ಸಭೆ ತರುವುದು ಅವಶ್ಯ ಎಂದರು.

ದಕ್ಷಿಣ ಭಾರತ ಜೈನ ಸಭಾದ ವ್ಯಾಪ್ತಿ ವಿಸ್ತರಿಸಲು ಮತ್ತು ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಕೃಷಿ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತೇನೆ. ಜೈನ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿ ಯುವ ಜನಾಂಗದ ಸಮಸ್ಯೆ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಪಂಚಗಂಗಾ ಸಹಕಾರಿ ಕಾರ್ಖಾನೆ ಅಧ್ಯಕ್ಷ ಪಿ.ಎಂ. ಪಾಟೀಲ, ದತ್ತ ಕಾರ್ಖಾನೆ ನಿರ್ದೇಶಕ ಇಂದ್ರಜಿತ್ ಪಾಟೀಲ, ಅಪ್ಪಾಸಾಹೇಬ ಪಾಟೀಲ, ಉದ್ಯಮಿ ಗೌತಮ ಜೆಲೆ, ನಿಪ್ಪಾಣಿ ನಗರಸಭೆ ಸದಸ್ಯ ಉಪಾಸನಾ ಗಾರ್ವೆ, ವಿನಾಯಕ ವಡೆ, ದಿಲೀಪ ಪಠಾಡೆ, ಜಿನ್ನಪ್ಪ ಅಸ್ಕಿ, ಮಹಾವೀರ ನೀಲಜಗಿ, ರಾಜೀವ ಚೌಗುಲಾ, ಅಶೋಕ ಪಾಟೀಲ, ಸುದರ್ಶನ ಖೋತ, ಬಾಳಾಸಾಹೇಬ ಪಾಟೀಲ, ಇಂದ್ರಜಿತ್ ಸೋಲಂಕುರೆ, ಯುವರಾಜ ಪಾಟೀಲ, ಮಹಾಂತೇಶ ಪಾಟೀಲ, ಸತೀಶ ಪಾಟೀಲ, ಸಚಿನ ಬಿಂದಗೆ, ಅಭಿಜಿತ್ ಪಾಟೀಲ, ಚೇತನ ಪಾಟೀಲ, ಅರುಣ ಬೋನೆ, ನಿತಿನ ದೇಸಾಯಿ, ಅಣ್ಣಾಸಾಹೇಬ ಕದಂ, ಬಾಳು ದೇಸಾಯಿ, ಸುಕುಮಾರ ಗಿಜುನೆ, ಮುಸಾ ಅಫರಾಜ, ಬಾಳಾಸಾಹೇಬ ಪಾಟೀಲ, ಪಂಕಜ ತಿಪ್ಪನವರ ಇತರರಿದ್ದರು.