ಜೈನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್​ ನಿರ್ಮಾಣ ಕುರಿತು ಮನವಿ ಸಲ್ಲಿಸಲಾಯಿತು. ಲಕ್ಷ$್ಮಣ ಸವದಿ, ಡಿ.ಸುಧಾಕರ, ಜಿತೇಂದ್ರಕುಮಾರ, ಶೀತಲಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಜೈನ ಸಮುದಾಯದ ನಿಗಮ ಮಂಡಳಿ ಸ್ಥಾಪನೆ: ಜಮೀರ್​ ಅಹ್ಮದ್ ಖಾನ್​ ಭರವಸೆ

ಕಾಗವಾಡ: ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜೈನ ಸಮುದಾಯದವರಿದ್ದು, ಶ್ರೀವೇ ಜೈನ ಸಮುದಾಯ ನಿಗಮ ಮಂಡಳಿ ಸ್ಥಾಪಿಸುವ ಕುರಿತು ೂಷಣೆ ಮಾಡಲಾಗುವುದು ಎಂದು ಅಲ್ಪಸಂಖ್ಯಾತ ಸಚಿವ ಜಮೀರ್​ ಅಹ್ಮದ್​ ಖಾನ್​ ಭರವಸೆ ನೀಡಿದರು.

ಬೆಂಗಳೂರಿನಲ್ಲಿ ರಾಜ್ಯ ಜೈನ್​ ಅಸೋಸಿಯೇಶನ್​ ನೇತೃತ್ವದಲ್ಲಿ ಸಚಿವ ಡಿ.ಸುಧಾಕರ, ಶಾಸಕ ಲಕ್ಷ$್ಮಣ ಸವದಿಯವರಿದ್ದ ನಿಯೋಗದ ವತಿಯಿಂದ ಈಚೆಗೆ ಮನವಿ ಸ್ವೀಕರಿಸಿ ಮಾತನಾಡಿ, ಇದೇ ವರ್ಷ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಗಮ ಮಂಡಳಿ ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಶಾಸಕ ಲಕ್ಷ$್ಮಣ ಸವದಿ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಕಳೆದ ಅಧಿವೇಶನದಲ್ಲಿ ವರೂರದ ಗುಣದರನಂದಿ ಮುನಿಮಹಾರಾಜರು ಪ್ರಮುಖವಾಗಿ ಜೈನ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಜೈನ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ಪ್ರಾರಂಭಿಸಬೇಕೆಂದು ಪ್ರಮುಖ ಬೇಡಿಕೆ ಇಟ್ಟಿದ್ದರು. ಈಗ ಬೆಳಗಾವಿ ಹಾಗೂ ಧಾರವಾಡದಲ್ಲಿ ಜೈನ ವಿದ್ಯಾರ್ಥಿಗಳಿಗೆ ಎರಡು ಹಾಸ್ಟೆಲ್​ಗಳನ್ನು ಅಲ್ಪಸಂಖ್ಯಾತ ಸಚಿವ ಜಮೀರ್​ ಅಹ್ಮದ್​ ಖಾನ್​ ಮಂಜೂರು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ನಿಗಮ ಮಂಡಳಿ ಸ್ಥಾಪಿಸಲಿದ್ದಾರೆ ಎಂದರು.

ಹಾಸ್ಟೆಲ್​ ಮಂಜೂರು: ಲಕ್ಷ$್ಮಣ ಸವದಿ ಪ್ರಸ್ತಾಪಿಸಿದಂತೆ ಬೆಳಗಾವಿ, ವಿಜಯಪುರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬೆಳಗಾವಿ ಹಾಗೂ ಧಾರವಾಡದಲ್ಲಿ ಜೈನ ಹಾಸ್ಟೆಲ್​ ಮಂಜೂರು ಮಾಡಿರುವುದಾಗಿ ಸಚಿವರು ಭರವಸೆ ನೀಡಿದರು.

ಡಿ.ಸುಧಾಕರ, ಮಾಜಿ ಸಚಿವ ವೀರಕುಮಾರ, ಕರ್ನಾಟಕ ಜೈನ ಅಸೋಸಿಯೇಷನ್​ ಅಧ್ಯ ಜಿತೇಂದ್ರಕುಮಾರ, ರಾಜ್ಯ ಉಪಾಧ್ಯ ಶೀತಲಗೌಡ ಪಾಟೀಲ, ಕೀರ್ತಿರಾಜ, ಜೈನ ಸಮುದಾಯದ ಮುಖಂಡರಾದ ಅರುಣಕುಮಾರ ಯಲಗುದ್ರಿ, ಅಭಯ ಅವಲಕ್ಕಿ, ಸಂಜಯ ನಾಡಗೌಡ, ಅಮರ ದುರ್ಗಣ್ಣವರ, ಕೆ.ಎ.ವನಜೋಳ, ಸಂಜಯ ಕುಚನೂರೆ, ಯಶವಂತ ಪಾಟೀಲ, ಬಾಬು ಅಕಿವಾಟೆ, ಅಣ್ಣಾಸಾಹೇಬ ನಂದಗಾಂವ, ಡಾ.ನೀರಜ, ಧರನೇಂದ್ರಯ್ಯ, ಸಂದೀಪ ಪಾಟೀಲ ಇತರರಿದ್ದರು.