ಜಿಲ್ಲೆ

ಜೈಲುಗಳು ಲಾಡ್ಜ್​ಗಳಾಗಿವೆ, 7 ಕೇಂದ್ರ ಕಾರಗೃಹವಾಸ ಅನುಭವಿಸಿದ ಶಿಗ್ಲಿ ಬಸ್ಯಾ ಹೇಳಿಕೆ

ಗದಗ: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಹತ್ತಾರು ಪ್ರಕರಣಗಳಲ್ಲಿ ಭಾಗಿ ಆಗಿ ರಾಜ್ಯದ ಬಹುತೇಕ ಕಾರಾಗೃಹವಾಸ ಅನುಭವಿಸಿರುವ ಶಿಗ್ಲಿ ಬಸ್ಯಾ ರಾಜ್ಯದ ಕಾರಾಗೃಹಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ರಾಜ್ಯದ ಕಾರಾಗೃಹಗಳು ಲಾಡ್ಜ್​ಗಳಾಗಿವೆ. ಜೈಲುಗಳು ಮೊದಲಿನಂತಿಲ್ಲ. ಅಲ್ಲಿನ ಸೌಕರ್ಯ, ಸೌಲಭ್ಯಗಳು ಹೊರಗಿನ ಜಗತ್ತಿಗೆ ತಿಳಿಯುವುದಿಲ್ಲ. ಅಗತ್ಯವಿದ್ದರೆ ರಾಜಾತಿಥ್ಯ ನೀಡಲಾಗುತ್ತದೆ. ಇದು ಸತ್ಯ. ಬಳ್ಳಾರಿ ಜೈಲು ಕೂಡ ದರ್ಶನ್​ಗೆ ಸೇಫ್ ಅಲ್ಲ. ವಿಐಪಿ ಆರೋಪಿಗಳಿಂದ ಜೈಲು ಅಧಿಕಾರಿ, ಸಿಬ್ಬಂದಿ ವರ್ಗದವರು ನೌಕರಿ ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗಬಹುದು. ತಿಹಾರ್ ಜೈಲಿಗೆ ದರ್ಶನ್ ಸ್ಥಳಾಂತರ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಕುಖ್ಯಾತ ಕಳ್ಳರಲ್ಲಿ ಒಬ್ಬ ಎಂಬ ಆರೋಪಕ್ಕೆ ಗುರಿಯಾಗಿದ್ದ ಬಸ್ಯಾ, ಈಗ ಅಂಥದ್ದನ್ನೆಲ್ಲ ಬಿಟ್ಟು ಸ್ವಂತ ಊಎಉ ಶಿಗ್ಲಿ ವಾಸಿ. ತನ್ನ ವಿರುದ್ಧದ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸುವ ಮೂಲಕ ಈತ ಗಮನ ಸೆಳೆದಿದ್ದರು.