ಜಿಲ್ಲೆ

ಅಶ್ಲೀಲ ವರ್ತನೆಗೈದಾತನಿಗೆ ಜೈಲು, ದಂಡ

ಸೌಮ್ಯ ಆರ್

ಕಾಸರಗೋಡು: ಎಳೆಯ ಬಾಲಕಿಯರ ಮುಂದೆ ಅಶ್ಲೀಲ ವರ್ತನೆಗೈದ ಪ್ರಕರಣದ ಅಪರಾಧಿ ಚಿತ್ತಾರಿಕಲ್ ಪಾರಕಡವು ನಿವಾಸಿ ಸಂದೀಪ್ ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ೆಕ್ಸೋ ನ್ಯಾಯಾಲಯ ಒಂದು ವರ್ಷ ಮೂರು ತಿಂಗಳ ಜೈಲು ಶಿಕ್ಷೆ ಮತ್ತು 10,500 ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ, ಅಪರಾಧಿ ಆರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಒಂಬತ್ತು ಮತ್ತು ಆರು ವರ್ಷ ಪ್ರಾಯದ ಬಾಲಕಿಯರಿಬ್ಬರ ಎದುರು ಅಶ್ಲೀಲ ವರ್ತನೆಗೈದ ಪ್ರಕರಣಕ್ಕೆ ಸಂಬಂಧಿಸಿ ಚಿತ್ತಾರಿಕಲ್ ಠಾಣೆ ಪೊಲೀಸರು ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿದ್ದರು.