ಮಾಗಡಿ: ಗ್ರಾಮಗಳಲ್ಲಿ ದಲಿತ ಸಂಘಟನೆಗಳು ಅನಿವಾರ್ಯವಾಗಿವೆ ಎಂದು ಕರ್ನಾಟಕ ಜೈಭೀಮ್ ಚಳವಳಿ ಸಂಸ್ಥಾಪಕ ಅಧ್ಯಕ್ಷ ಎಸ್. ಶಿವಶಂಕರ್ ಹೇಳಿದರು.
ತಾಲೂಕಿನ ಕನಕೇನಹಳ್ಳಿಯಲ್ಲಿ ಸೋಮವಾರ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ಸಂಘಟನೆಯನ್ನು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಶಾಖೆಗಳನ್ನು ಆರಂಭಿಸಲಾಗುತ್ತಿದ್ದು, ಈಗಾಗಲೇ ನೆಲಮಂಗಲ, ರಾಮನಗರ, ಬೆಂಗಳೂರು, ತಿಪಟೂರು, ಸೋಂಪುರ, ಕುದೂರು, ಸೋಲೂರು ಸೇರಿ 12 ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ನ್ಯಾಯ ದೊರಕಿಸುವುದು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.
ಸೋಲೂರು ಹೋಬಳಿ ಅಧ್ಯಕ್ಷರನ್ನಾಗಿ ದೇವರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತ್ಯಾಮಗೊಂಡ್ಲು ಹೋಬಳಿ ರವಿ, ಸೋಂಪುರ ಹೋಬಳಿ ಅಧ್ಯಕ್ಷ ಶ್ರೀಧರ್, ನೆಲಮಂಗಲ ತಾಲೂಕು ಉಪಾಧ್ಯಕ್ಷ ಅಶ್ವತ್ಥಯ್ಯ, ನೆಲಮಂಗಲ ಕಾರ್ಯದರ್ಶಿ ಶ್ರೀನಿವಾಸ್,ಸಂತೋಷ್ ಕುಮಾರ್, ಪುರುಷೋತ್ತಮ್, ಬೆಂಗಳೂರು ನಗರ ಯುವ ಘಟಕ ಅಧ್ಯಕ್ಷ ನವೀನ್ ಕುಮಾರ್, ಖಜಾಂಚಿ ಗಂಗರಾಜು, ಗೌರವಾಧ್ಯಕ್ಷ ಲೋಕೇಶ್, ರಾಮನಗರ ಯುವ ಘಟಕದ ಅಧ್ಯಕ್ಷ ಶಿವರಾಜ್, ಜಿಲ್ಲಾಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ಚಂದನ್ ಕುಮಾರ್, ಬಿಟ್ಟಸಂದ್ರ ಗ್ರಾಪಂ ಸದಸ್ಯ ನೇತ್ರೇಶ್ ಇದ್ದರು.