ಜಿಲ್ಲೆ

ಜೈ ಕರ್ನಾಟಕ ಗಾಯಕರ ಬಳಗ ಅಸ್ತಿತ್ವಕ್ಕೆ

ಮೈಸೂರು: ರಾಜ್ಯದ ಗಾಯಕರ ಹಿತ ಕಾಯುವುದರ ಜತೆಗೆ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ರಾಜ್ಯ ಗಾಯಕರ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಜೈ ಕರ್ನಾಟಕ ಗಾಯಕರ ಬಳಗವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಬಳಗದ ಅಧ್ಯಕ್ಷ ಎಚ್.ಎ.ಶ್ರೀನಿವಾಸಮೂರ್ತಿ ತಿಳಿಸಿದರು.


ರಾಜ್ಯದಲ್ಲಿ ಗಾಯಕರನ್ನು ಸಂಘಟಿಸುವುದು, ಗಾಯಕರಿಗೆ ವೇದಿಕೆ ಕಲ್ಪಿಸುವುದು, ಗಾಯಕರ ಜೀವನಮಟ್ಟ ಸುಧಾರಣೆಗೆ ಶ್ರಮಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಡಿಷನ್‌ಗಳನ್ನು ಏರ್ಪಡಿಸಿ ಹೊಸ ಪ್ರತಿಭೆ ಗುರುತಿಸಲಾಗುವುದು. ಈ ರೀತಿಯ ಕಾರ್ಯಕ್ರಮ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯಲಿದೆ. ಹೀಗಾಗಿ ಸದಸ್ಯರಾಗಲಿಚ್ಛಿಸುವವರು ಮೊ.ಸಂಖ್ಯೆ 88921 96615ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪದಾಧಿಕಾರಿಗಳಾದ ವಿಜಯಾ ರಮೇಶ್, ಮೇಘಾ ಸುರೇಶ್, ಅಶ್ವಿನಿ, ಕುಮಾರಸ್ವಾಮಿ, ರಾಬರ್ಟ್ ಇದ್ದರು.