ಜಿಲ್ಲೆ

6ರಂದು ಮೈಸೂರಲ್ಲಿ ಜಾಗೃತಿ ಸಮಾವೇಶ: ದಸಂಸ ಅಧ್ಯಕ್ಷ ವೆಂಕಟಗಿರಿಯಯ್ಯ ಮಾಹಿತಿ

ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಡಿ.6ರಂದು ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.
ಶೋಷಿತ ಸಮುದಾಯಗಳ ಸ್ವತಂತ್ರ ರಾಜ್ಯಾಧಿಕಾರಕ್ಕಾಗಿ ಹಾಗೂ ಪರ್ಯಾಯ ರಾಜಕಾರಣಕ್ಕಾಗಿ ದಲಿತ ಸಂಘರ್ಷ ಸಮಿತಿಗಳ ರಾಜ್ಯಮಟ್ಟದ ಜನ ಜಾಗೃತಿ ಸಮಾವೇಶ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ವಿಭಾಗದಲ್ಲಿಯೂ ಆಯೋಜಿಸಲಾಗುವುದು. ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಯ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವವಾದಿ ಪ್ರಬುದ್ಧ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆಯೋಜಿಸಿರುವ ಸಮಾರಂಭ ಅಂದು ಮಧ್ಯಾಹ್ನ 12ಕ್ಕೆ ಪ್ರಾರಂಭವಾಗಲಿದೆ. ಇನ್ನು ಸಮಿತಿಯ ಜಿಲ್ಲೆ ಹಾಗೂ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನೂತನ ಪದಾಧಿಕಾರಿಗಳು: ಜಿಲ್ಲಾ ಘಟಕ-ಕೆ.ಎಂ.ಶ್ರೀನಿವಾಸ್(ಅಧ್ಯಕ್ಷ), ಚಿಕ್ಕಯ್ಯ(ಉಪಾಧ್ಯಕ್ಷ), ನಾಗರಾಜ್(ಪ್ರಧಾನ ಕಾರ್ಯದರ್ಶಿ), ಎಸ್.ಕುಮಾರ್, ಎಚ್.ಬಿ.ಹರಿಕುಮಾರ್, ವೈ.ಸುರೇಶ್, ಮಾರಪ್ಪ, ಎಂ.ಬಿ.ಮಹೇಶ್(ಸಂಘಟನಾ ಕಾರ್ಯದರ್ಶಿ), ಎಚ್.ಎಸ್.ನಂದೀಶ್(ಖಜಾಂಚಿ), ವೈ.ಎನ್.ಮಮತಾ(ಮಹಿಳಾ ಘಟಕದ ಅಧ್ಯಕ್ಷೆ), ತಾಲೂಕು ಅಧ್ಯಕ್ಷರು-ಮಹದೇವ(ಮಂಡ್ಯ), ಬಿ.ಆನಂದ್(ಮದ್ದೂರು), ಬಿ.ಎಂ.ಸೋಮಶೇಖರ್(ಮಳವಳ್ಳಿ), ಸುರೇಶ್(ಶ್ರೀರಂಗಪಟ್ಟಣ), ಬಲರಾಮು(ನಾಗಮಂಗಲ), ಶಿವಕುಮಾರ್(ಕೆ.ಆರ್.ಪೇಟೆ) ಮತ್ತು ದೇವರಾಜು(ಪಾಂಡವಪುರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.