ಇಳಕಲ್ಲದ ಶಿವಶರಣ ಮಾದರ ಚನ್ನಯ್ಯ ನಗರದಲ್ಲಿ ಹಮ್ಮಿಕೊಂಡ ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಹೇಮಂತ ಭೂತನಾಳ ಮಾತನಾಡಿದರು. ಸುಧಾರಾಣಿ ಸಂಗಮ, ಸುರೇಶ ಜಂಗ್ಲಿ, ಶರಣಪ್ಪ ಆಮದಿಹಾಳ, ಶ್ರೀಕಾಂತ ಹೊಸಮನಿ, ಪ್ರೊ. ಬಸವರಾಜ ಮಾದರ, ಸಿದ್ದಪ್ಪ ಮಾದರ ಇದ್ದಾರೆ.  
ಜಿಲ್ಲೆ

ಜಗಜೀವನರಾಮ್ ಸೇವೆ ಅನನ್ಯ

ವಿನಯ ಆಶೋಕ ನಾಯ್ಕ

ಇಳಕಲ್ಲ(ಗ್ರಾ): ಭಾರತದ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಕೆಳವರ್ಗದ ಜನರಿಗಾಗಿ ಶ್ರಮಿಸಿರುವದನ್ನು ಯಾರೂ ಮರೆಯಲಾರರು ಎಂದು ನಿವೃತ್ತ ಪ್ರಾಚಾರ್ಯ ಹೇಮಂತ ಭೂತನಾಳ ಹೇಳಿದರು.

ಶಿವಶರಣ ಮಾದರ ಚನ್ನಯ್ಯ ನಗರದಲ್ಲಿ ನಡೆದ ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪ ಪ್ರಧಾನಿಯಾಗಿ, ಹಲವಾರು ಇಲಾಖೆಗಳ ಸಚಿವರಾಗಿ ಜಗಜೀವನರಾಮ್ ಸಲ್ಲಿಸಿದ ಸೇವೆ ಅನನ್ಯ ಎಂದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತರ ಅಭಿವೃದ್ಧಿಗಾಗಿ ಜಗಜೀವನರಾಮ್ ಮಾಡಿದ ಕೆಲಸಗಳು ಸಾಕಷ್ಟಿವೆ ಎಂದರು.

ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜಗಜೀವನರಾಮ್ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ. ದೇಶದ ಆಹಾರ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

\ನಗರಸಭೆ ಸದಸ್ಯ ಸುರೇಶ ಜಂಗ್ಲಿ, ಅಂಬೇಡ್ಕರ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶರಣಪ್ಪ ಆಮದಿಹಾಳ, ಶ್ರೀಕಾಂತ ಹೊಸಮನಿ, ಪ್ರೊ. ಬಸವರಾಜ ಮಾದರ, ಸಿದ್ದಪ್ಪ ಮಾದರ ಮತ್ತಿತರರಿದ್ದರು. ಸತೀಶ ಮಾದರ ಕಾರ್ಯಕ್ರಮ ನಿರ್ವಹಿಸಿದರು.