ಜಿಲ್ಲೆ

ಶೈಕ್ಷಣಿಕ ಸಮಸ್ಯೆ ನಿವಾರಣೆಗೆ ಆಗ್ರಹ

Davanagere

ಜಗಳೂರು: ಕರೊನಾದಿಂದ ರಾಜ್ಯದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಬುಧವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಳೆದ ನಾಲ್ಕು ತಿಂಗಳಿಂದ ಕರೊನಾ ಮಹಾಮಾರಿಯಿಂದ ಶೈಕ್ಷಣಿಕ ಚಟುವಟಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದುಳಿಯುವ ಸಾಧ್ಯತೆ ಇದೆ. ಸರ್ಕಾರ ಈ ತೊಂದರೆ ತಪ್ಪಿಸಿ ಸುರಕ್ಷಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಮನವಿ ಮಾಡಿದರು.

ಡಿವೈಎಫ್‌ಐ ಮುಖಂಡ ಆರ್. ಓಬಳೇಶ, ಎಸ್‌ಎಫ್‌ಐ ತಾಲೂಕಾಧ್ಯಕ್ಷ ಅಂಜಿನಪ್ಪ, ಜಿಲ್ಲಾ ಸಂಚಾಲಕ ಅನಂತರಾಜು, ಜಿಲ್ಲಾ ಮುಖಂಡ ಗೌರಿಪುರ ಮೈಲೇಶ್ ಮತ್ತಿತರರಿದ್ದರು.