ಜಿಲ್ಲೆ

ಬಾಬೂಜಿ ಅಸ್ಪೃಶ್ಯರ ಪಾಲಿನ ಆರಾಧ್ಯ ದೇವರು

ಜಗಳೂರು: ಬಾಬೂಜಿ ಎಂದೇ ಖ್ಯಾತಿ ಹೊಂದಿದ್ದ ಬಾಬು ಜಗಜೀವನ್ ರಾಂ, ಅಸ್ಪೃಶ್ಯರ ಪಾಲಿನ ಆರಾಧ್ಯ ದೇವರು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಬಣ್ಣಿಸಿದರು.

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬುಧವಾರ ಏರ್ಪಡಿಸಿದ್ದ ಬಾಬು ಜಗಜೀವನ್‌ರಾಂ ಸರಳ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಜವಾಹರ್‌ಲಾಲ್ ನೆಹರು ಅವರ ಅವಧಿಯಲ್ಲಿ ಉಪ ಪ್ರಧಾನಿ ಆಗುವ ಮೂಲಕ ಶೋಷಿತರ ಧ್ವನಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ ಪ್ರಖರ ರಾಜಕಾರಣಿ. ಇವರ ಆದರ್ಶ ಯುವ ಸಮೂಹಕ್ಕೆ ದಾರಿದೀಪವಾಗಬೇಕಿದೆ ಎಂದರು.

ಲಿಂಗಣ್ಣನಹಳ್ಳಿ ತಿಮ್ಮಣ್ಣ, ಮಲ್ಲಿಕಾರ್ಜುನ್, ಅಲ್ಲಾಭಕ್ಷಿ, ಮಲ್ಲಪ್ಪ, ಗಿರೀಶ್, ಡಿಎಸ್‌ಎಸ್‌ನ ಸತೀಶ್, ಮಲೆಮಾಚಿಕೆರೆ ಕೆಂಚಮ್ಮ, ಧನ್ಯ ಕುಮಾರ್ ಇತರರಿದ್ದರು.