ಜಿಲ್ಲೆ

ಜಗಜೀವನರಾಮ್​ರವರ ಪುತ್ಥಳಿ ಸ್ಥಾಪನೆಗೆ ಮನವಿ

Gadag - Shivanand Hiremath

ಗದಗ: ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್​ ಅವರ 117ನೇ ಜಯಂತಿ ಅಂಗವಾಗಿ ಗದಗ ನಗರದ ಸರ್ಕಲ್​ಗೆ ಡಾ. ಬಾಬು ಜಗಜೀವನರಾಮ್​ರವರ ಪುತ್ಥಳಿ ಸ್ಥಾಪಿಸಿ ನಾಮಕರಣ ಮಾಡುವಂತೆ ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ. ಜಗಜೀವನರಾಮ ಸಮಾನತೆ ಸಮಿತಿ ಸಂಚಾಲಕ ಯುವರಾಜ ಬಳ್ಳಾರಿ ಸಚಿವ ಎಚ್​.ಕೆ. ಪಾಟೀಲರಿಗೆ ಮನವಿ ಮಾಡಿದರು.
ಭಾರತದ ದೇಶದ ಉಪಪ್ರಧಾನಿಯಾಗಿ, ದಲಿತರ ಧ್ವನಿಯಾಗಿ. ಭಾರತ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂಬ ಹೆಸರನ್ನು ಡಾ. ಬಾಬು ಜಗಜೀವನರಾಮರವರು ಗಳಿಸಿದ್ದಾರೆ. ಭಾರತದ ದೇಶದ ಸರ್ವ ಧರ್ಮ ಮತ್ತು ಎಲ್ಲ ಜಾತಿ ಜನಾಂಗದವರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಏಪ್ರಿಲ್​ 5 ರಂದು ಡಾ. ಬಾಬು ಜಗಜೀವನರಾಮ ಇವರ ಜಯಂತಿ ಇದ್ದು, ಈ ಹಿನ್ನೆಲೆ ವೃತ್ತವೊಂದಕ್ಕೆ ಇವರ ಹೆಸರು ಮತ್ತು ಪುತ್ಥಳಿ ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ಡಾ. ಎಚ್​. ಕೆ. ಪಾಟೀಲರು, ಮುಂಬರುವ ದಿನಗಳಲ್ಲಿ ಡಾ. ಬಾಬು ಜಗಜೀವನರಾಮ್​ ಅವರ ಪುತ್ಥಳಿಯನ್ನು ನಗರದ ಪ್ರಮುಖ ವೃತ್ತದಲ್ಲಿ ಸ್ಥಾಪಿಸಿ ಅವರ ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡಿದರು
ಎಸ್​. ಎನ್​. ಬಳ್ಳಾರಿ, ಬಾಲರಾಜ ಅರಬರ, ಗೋವಿಂದರಾಜ ಬಳ್ಳಾರಿ, ಸಯ್ಯದಖಾಲಿದ ಕೊಪ್ಪಳ, ಮಾರುತಿ ಗುಡಿಮನಿ, ಮಹೇಶ ನಾನ್​ಬಲ್​, ಸುಂಕಪ್ಪ ಗುತ್ತಿ, ನಾಗರಜ ಕಿನ್ನಾರ ಇದ್ದರು.