ಜಿಲ್ಲೆ

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನ ಆವರಣದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಶ್ರೀ ಜಗದ್ಗುರು ರೇಣುಕರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಬುಧವಾರ ಏರ್ಪಡಿಸಲಾಗಿತ್ತು.

ಬೆಳಗ್ಗೆ ರುದ್ರಾಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು.

ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಮಹಾಕ್ಷೇತ್ರದ ಸ್ವಯಂಭು ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿ ಅಲ್ಲಿಂದ ಮಲಯಾಚಲ ಗಿರಿಶ್ರೇಣಿಯಲ್ಲಿ ಆಶ್ರಮವಾಸಿಯಾಗಿದ್ದ ಮಹಾಮುನಿ ಅಗಸ್ತ್ಯರನ್ನು ನಿಮಿತ್ತ ಮಾಡಿಕೊಂಡು ಜಗತ್ತಿನ ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಶಿವಾದ್ವೆತ ಸಿದ್ಧಾಂತವನ್ನು ಬೋಧಿಸಿದ್ದಾರೆ ಎಂದರು.

ಶ್ರೀ ಶಿವಯೋಗಿ ಶಿವಾಚಾರ್ಯರು ರೇಣುಕಾಗಸ್ತ ಸಂವಾದ ರೂಪದಲ್ಲಿ ರಚಿಸಿರುವ ಶ್ರೀ ಸಿದ್ದಾಂತ ಶಿಖಾಮಣಿಯು ವೀರಶೈವ ಧರ್ಮಗ್ರಂಥವೆಂದು ಮಾನ್ಯವಾಗಿದೆ. ಅಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿದ ವೀರಸಿಂಹಾಸನ ಮಹಾಪೀಠವೇ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಶ್ರೀಮದ್ರಂಭಾಪುರಿ ಪೀಠ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭೆ ಧಾರವಾಡ ಜಿಲ್ಲೆಯ ನಿರ್ದೇಶಕ ಶಶಿಶೇಖರ ಡಂಗನವರ ಮಾತನಾಡಿದರು. ಡಾ. ಎಸ್.ವಿ. ಹಿರೇಮಠ ಸ್ವಾಗತಿಸಿದರು.

ಆರ್.ಎಂ. ಹಿರೇಮಠ, ವಿ.ಜಿ. ಪಾಟೀಲ, ಪಂಚಲಿಂಗಪ್ಪ ಕವಲೂರ, ಎಂ.ಡಿ. ಜಾಧವ, ಶಿವಾನಂದ ಮಸಿಹಂಚಿನಾಳ, ಎಸ್.ಆರ್. ಅಂಗಡಿ, ವಿ.ಎಸ್. ಸಪ್ಪಿಮಠ, ಎಸ್.ಸಿ. ಕಮ್ಮಾರ, ಸುಮಂಗಲ ಹಿರೇಮಠ, ಡಾ. ಸುರೇಶ ಮೆಣಸಿಗಿ, ಜಗದ್ಗುರು ರೇಣುಕಾಚಾರ್ಯ ಸೊಸೈಟಿ ನಿರ್ದೇಶಕರು, ಸಾಂಸತಿಕ ಸಂಘದ ಸದಸ್ಯರು ಉಪಸ್ಥಿತರಿದ್ದರು.