ಬೈಲಹೊಂಗಲ ತಾಲೂಕಿನ ನೇಗಿನಹಾಳದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ರಥೋತ್ಸವ ಅದ್ದೂರಿಯಾಗಿ ಜರುಗಿತು. 
ಜಿಲ್ಲೆ

ಜಗದ್ಗುರು ಮಡಿವಾಳೇಶ್ವರ ರಥೋತ್ಸವ ಸಂಭ್ರಮ

ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದ ಆರಾಧ್ಯದೆವ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಹಾರಥೋತ್ಸವ ಸಾವಿರಾರು ಭಕ್ತರ ಸಮೂಹದಲ್ಲಿ ಶನಿವಾರ ಅತ್ಯಂತ ಸಂಭ್ರಮದಿಂದ ನಡೆಯಿತು.

ವಚನಾಭಿಷೇಕ, ಮಹಾಪೂಜೆ, ನಿರಂತರ ಮಹಾಪ್ರಸಾದ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ವಾದ್ಯಮೇಳಗಳ ಕುಣಿತ, ಕರಡಿ ಮಜಲು, ಭಜನಾ ಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು.ಯುವಜನರು ಮಡಿವಾಳೇಶ್ವರ ರಥ ಎಳೆದರು. ಗ್ರಾಮಸ್ಥರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸುವ ಮೂಲಕ ಹರಕೆ ತೀರಿಸಿದರು.

ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು, ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಸ್ವಾಮೀಜಿ, ಈರಪ್ಪಜ್ಜ ಪಟ್ಟೇದ, ಮುಖಂಡರಾದ ವಿಕ್ರಮ ಇನಾಮದಾರ, ನಾನಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಡಿವಾಳಪ್ಪ ಕುಲ್ಲೋಳಿ, ಗ್ರಾಪಂ ಅಧ್ಯಕ್ಷ ಮಹಾದೇವಿ ಕೋಟಗಿ, ಶಿವಾಜಿ ಮುತ್ತಗಿ, ನಾಗರಾಜ ನರಸನ್ನವರ, ಮಹಾದೇವ ಮಡಿವಾಳರ, ಮಹಾಂತೇಶ ದಿವಾಣದ, ಪ್ರಭು ಮರಿತಮ್ಮನವರ, ಶಿವಾನಂದ ಕುಂಕೂರ, ಸೋಮನಿಂಗ ಭಾಗೇವಾಡಿ, ಈರಪ್ಪ ಕಿವಡಸನ್ನವರ, ಶಿವಾನಂದ ದಿವಾಣದ, ರುದ್ರಪ್ಪ ಬೋಳೆತ್ತಿನ ಇತರರಿದ್ದರು.