ಜಗದಂಬಾದೇವಿ, ಸಂತ ಸೇವಾಲಾಲ 
ಜಿಲ್ಲೆ

ಮಿಣಜಗಿ ಗ್ರಾಮದಲ್ಲಿ ಜಗದಂಬಾದೇವಿ, ಸಂತ ಸೇವಾಲಾಲ ಜಾತ್ರೋತ್ಸವ

ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಜಗದಂಬಾದೇವಿ ಹಾಗೂ ಸಂತ ಸೇವಾಲಾಲ ಜಾತ್ರೆ ಅ.7 ರಿಂದ 5 ದಿನ ಜರುಗಲಿದೆ.

7 ರಂದು ಬೆಳಗ್ಗೆ 6.15ಕ್ಕೆ ರಮೇಶ ಲಕ್ಷ್ಮಣ ನಾಯಕ ಮನೆಯಿಂದ ಕಲಶದೊಂದಿಗೆ ಹೊರಟು ಸಂಗನಗೌಡ ಪಾಟೀಲರ ಬಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮ ಮುಗಿಸಿಕೊಂಡು ಜಗದಂಬಾದೇವಿ ಹಾಗೂ ಸಂತ ಸೇವಾಲಾಲರ ಭಾವಚಿತ್ರದ ಭವ್ಯ ಮೆರವಣಿಗೆ ವಿವಿಧ ವಾದ್ಯಮೇಳದೊಂದಿಗೆ ಪ್ರಾರಂಭಗೊಂಡು ದೇವಸ್ಥಾನ ತಲುಪುವುದು.

ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಸೋಮಲಿಂಗ ಸ್ವಾಮಿಗಳು, ವಜ್ಜಲ ತಾಂಡಾದ ಬಂಜಾರ ಶಕ್ತಿಪೀಠದ ವಿಠ್ಠಲ ಮಹಾರಾಜರು ಸಾನ್ನಿಧ್ಯ ವಹಿಸುವರು.

ರಾತ್ರಿ 9 ಗಂಟೆಗೆ ಕೊಂಕಣಗಾಂವದ ಮಾಳಿಂಗೇಶ್ವರ ಡೊಳ್ಳಿನ ಸಂಘ ಹಾಗೂ ಅಮೋಘಸಿದ್ಧೇಶ್ವರ ಡೊಳ್ಳಿನ ಹಾಡಿಕೆ ಸಂಘದವರಿಂದ ಡೊಳ್ಳಿನ ವಾದಿ-ಪ್ರತಿವಾದಿ ಹಾಡಿಕೆ ನಡೆಯಲಿದೆ.

8 ರಂದು ರಾತ್ರಿ 9 ಗಂಟೆಯಿಂದ ಗುಡೂರದ ಭವಾನಿ ಭಜನಾ ಮಂಡಳಿ ಹಾಗೂ ಸುನೂರ ಸೇವಾಲಾಲ ಮಹಾರಾಜ ಭಜನಾ ಮಂಡಳಿಯವರಿಂದ ಬಂಜಾರ ಭಜನಾ ವಾದಿ-ಪ್ರತಿವಾದಿ ಹಾಡಿಕೆ ಜರುಗುವುದು. 9 ರಂದು ರಾತ್ರಿ 9 ಗಂಟೆಗೆ ಶಿವ ಭಜನೆ ನಡೆಯಲಿವೆ.

10 ರಂದು ಮಿಣಜಗಿಯ ಬಂಜಾರ ಸಮಾಜದವರಿಂದ ಬಂಜಾರ ಭಜನೆ ನಡೆಯುವುದು. 11 ರಂದು ಬೆಳಗ್ಗೆ 9 ಗಂಟೆಗೆ ದೇವಿ ಗುಡಿ ಪ್ರವೇಶ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.