ಜಿಲ್ಲೆ

ಜಾಕ್‌ವೆಲ್ ಪಂಪ್ ದುರಸ್ತಿಗೆ ಕ್ರಮಕೈಗೊಳ್ಳಿ

ಲಿಂಗಸುಗೂರು: ನವಲಿ ಹಾಗೂ ಆನಾಹೊಸೂರು ಬಳಿ ನಿರ್ಮಿಸಲಾದ ಜಡಿಶಂಕರಲಿಂಗ (ರಾಂಪುರ) ಏತ ನೀರಾವರಿ ಜಾಕವೆಲ್‌ಗಳಿಗೆ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಗುರುವಾರ ಭೇಟಿ ನೀಡಿ ಯಂತ್ರೋಪಕರಣಗಳ ಕಾರ್ಯಕ್ಷಮತೆ ಪರಿಶೀಲಿಸಿದರು.

ಕೆಬಿಜೆಎನ್‌ಎಲ್ ನಾರಾಯಣಪುರ ವಲಯದ ಮುಖ್ಯ ಇಂಜಿನಿಯರ್ ಮಂಜುನಾಥ ಜತೆ ದೂರವಾಣಿಯಲ್ಲಿ ಮಾತನಾಡಿ, ಜಮೀನಿನಲ್ಲಿ ಬೆಳೆಗಳು ಕಾಳು ಕಟ್ಟುವ ಹಾಗೂ ಕೊಯ್ಲು ಹಂತದಲ್ಲಿವೆ. ನಾಲೆಗೆ ನೀರು ಹರಿಸದಿದ್ದರೆ ಬೆಳೆಗಳು ಹಾಳಾಗಲಿವೆ. ಪಂಪ್‌ಗಳನ್ನು ದುರಸ್ತಿ ಮಾಡಿಸಿ ಜಮೀನಿಗೆ ನೀರು ಹರಿಸುವಂತೆ ತಿಳಿಸಿದರು.

ಪ್ರಮುಖರಾದ ಕಂಠೆಪ್ಪಗೌಡ, ಪ್ರಭುಸ್ವಾಮಿ ಅತ್ತನೂರು, ಮಹ್ಮದ್ ರಫಿ, ಎಸ್,ಆರ್.ರಸೂಲ್, ಬಾಬಾಖಾಜಿ, ಬಾಬಾರೆಡ್ಡಿ ಮುನ್ನೂರು, ರುದ್ರಪ್ಪ ಬ್ಯಾಗಿ ಇದ್ದರು.