ಜಿಲ್ಲೆ

ನಗರ ನಡುವೆ ಹಲಸು ಹಬ್ಬದ ಘಮಘಮ

reportermng

ಮಂಗಳೂರು: ನಗರ ನಡುವಿನ ಶರವು ದೇವಸ್ಥಾನ ಸಮೀಪದ ಬಾಳಂಭಟ್ ಸಭಾಂಗಣದಲ್ಲಿ ಶನಿವಾರ ಇಡೀ ದಿನ ಹಲಸಿನ ಘಮಘಮ.

ಆಳೆತ್ತರಕ್ಕೆ ರಾಶಿ ಹಾಕಿದ ವಿವಿಧ ಜಾತಿಯ ಹಲಸು. ಹಲಸಿನ ವೈವಿಧ್ಯಮಯ ಖಾದ್ಯಗಳು, ಹೋಳಿಗೆ, ಐಸ್‌ಕ್ರೀಂ ಇತೀಚಿನ ಹಳ್ಳಿ ಸಂಪರ್ಕ ಇಲ್ಲದವರಿಗೆ ನಂಬಲು ಅಸಾಧ್ಯವಾಗುವಷ್ಟು ಬಗೆಯ ಹಲಸಿನ ತಿನಿಸುಗಳು…

ಎಲ್ಲ ವಯೋಮಾನದ ಜನರು ಉತ್ಸಾಹದಿಂದ ಓಡಾಡುತ್ತಿದ್ದರು. ಸಭಾಂಗಣ ತುಂಬಾ ಕೃಷ್ಯುತ್ಪನ್ನಗಳು ಮತ್ತು ಈ ಸಂಭ್ರಮ ತುಂಬಿಕೊಳ್ಳಲು ಆಗಮಿಸಿದ ಜನರು.
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಸಹಯೋಗದಲ್ಲಿ ಆಯೋಜಿಸಿದ ಎರಡು ದಿನಗಳ ‘ಹಲಸು ಹಬ್ಬ’ ಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಭಾನುವಾರ ಸಾಯಂಕಾಲ ಆರು ಗಂಟೆ ತನಕ ಸಾರ್ವಜನಿಕರು ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.