ಶಿರಸಿ: ಹಲಸು ಬೆಳೆಯ ಸಂಸ್ಕರಣೆ, ಮೌಲ್ಯ ವರ್ಧನೆ ಮಾಡುವ ನವೋದ್ಯಮಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ. ಇಲ್ಲಿಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸಿಗುವಂತಾಗಬೇಕು ಎಂದು ಎಂದು ಜಿಲ್ಲಾ ಸಾವಯವ ಒಕ್ಕೂಟದ ಉಪಾಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ನಗರದ ಕದಂಬ ಮಾರ್ಕೇಟಿಂಗನಲ್ಲಿ ಹಮ್ಮಿಕೊಂಡ ಹಲಸು ಮೇಳದ ಎರಡನೇ ದಿನದ ನವೋದ್ಯಮ ಗೋಷ್ಟಿಯಲ್ಲಿ ಆಶಯ ಮಾತನಾಡಿದ ಅವರು, ಹಲಸು ಬಳಕೆ ಎಲ್ಲಾ ರಾಷ್ಟçಗಳಲ್ಲಿಯೂ ಇದೆ. ಆದರೆ, ಹಲಸಿನ ಉತ್ಪನ್ನ ತಯಾರಿಕೆಯ ವಿಧಗಳು ನಮ್ಮಲ್ಲಿಯೇ ಜಾಸ್ತಿ. ಹಲಸಿನ ಬಳಕೆಯ ವೈವಧ್ಯತೆಯ ಪರಿಚಯವನ್ನು ನಾವು ಇತರ ರಾಷ್ಟ್ರಗಳಿಗೂ ಮಾಡಿಕೊಡಬೇಕಿದೆ ಎಂದ ಅವರು, ಒಗ್ಗೂಡಿಕೊಂಡು ಮಾರುಕಟ್ಟೆಯ ಕೌಶಲ ಅಭಿವೃದ್ದಿ ಮಾಡಿಕೊಳ್ಳಬೇಕು. ವೃತ್ತಿಪರತೆ ನಮ್ಮಲ್ಲಿ ಬೆಳೆಯಬೇಕು ಎಂದರು. ಚೇತನಾ ಸಂಸ್ಥೆಯ ಮುಖ್ಯಸ್ಥೆ ಡಾ. ಮಾಲಾ ಗಿರಿಧರ, ಉದ್ಯಮಿ ಗಣೇಶ ಭಟ್ಟ ಉಪ್ಪೋಣಿ, ಮಮತಾ ಶಮೆಮನೆ, ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿAಗ ಹೆಗಡೆ, ನಿರ್ದೇಶಕ ನಾರಾಯಣ ಹೆಗಡೆ ಗಡೀಕೈ, ವಿಜ್ಞಾನಿಗಳಾದ ಎ. ರಾಘವೇಂದ್ರ ರಾವ್, ಎ.ಎಸ್. ಚೌಹಾಣ, ಡಾ. ಮೋಹನ್ ಇದ್ದರು. ಭಾರ್ಗವ್ ಶಿಗೇಹಳ್ಳಿ ನಿರ್ವಹಿಸಿದರು. ಕೋಟೆಮನೆ ವಿಶ್ವೇಶ್ವರ ಭಟ್ಟ ಸ್ವಾಗತಿಸಿದರು.
ಹಲಸಿನ ಮೇಳದಲ್ಲಿ ಕೈಗೊಳ್ಳಲಾದ ನಿರ್ಣಯಗಳು
* ಬೆಳೆಗಾರರು ತಮ್ಮ ಹಿತ್ತಲು-ಬೆಟ್ಟಗಳಲ್ಲಿ ಹಲಸಿನ ವನ ಬೆಳೆಸಲು ವಿಶೇಷ ಕಾಳಜಿ ವಹಿಸಬೇಕು. ಗ್ರಾಮೀಣ ಉದ್ಯಮಿಗಳು ಹಲಸು ಉತ್ಪನ್ನ ಮೌಲ್ಯವರ್ಧನೆ ಮಾರುಕಟ್ಟೆ ಹೆಚ್ಚಿಸಲು ವಿಶೇಷ ಪ್ರಯತ್ನ
ನಡೆಸಬೇಕು.
* ತೋಟಗಾರಿಕಾ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕಾ ವಿಶ್ವ ವಿದ್ಯಾಲಯಗಳು ಹಲಸು ಮಲೆನಾಡಿನ ಪ್ರಮುಖ ಉಪ ಬೆಳೆ ಎಂಬುದನ್ನು ಅಧಿಕೃತವಾಗಿ ಘೋಷಿಸಬೇಕು.
* ಸರ್ಕಾರ ಹಾಫ್ಕಾಮ್ ಸಂಸ್ಥೆಗೆ ಜೀವ ತುಂಬಬೇಕು, ರೈತರು ಗ್ರಾಹಕರನ್ನು ಜೋಡಿಸುವ ಹಾಫ್‌ಕಾಮ್ ಹಲಸು ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಒದಗಿಸಬೇಕು.
* ತೋಟಗಾರಿಕಾ ಕಾಲೇಜು, ಅರಣ್ಯ ಕಾಲೇಜುಗಳು, ಕೃಷಿ/ತೋಟಗಾರಿಕಾ ವಿಶ್ವವಿದ್ಯಾಲಯಗಳು ಹಲಸು ತಳಿ-ವೈವಿಧ್ಯ ಹೆಚ್ಚಿಸಲು, ಗುರುತಿಸಲು, ರೈತರ ಸಹಭಾಗಿತ್ವದ ಪ್ರಯೋಗ ಅಧ್ಯಯನಗಳನ್ನು
ನಡೆಸಲು ಯೋಜನೆ ರೂಪಿಸಬೇಕು.
* ರಾಜ್ಯದ ಜೀವವೈವಿಧ್ಯ ಮಂಡಳಿ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗಗಳು ಹಲಸು ವೈವಿಧ್ಯ ತಳಿ ಸಂರಕ್ಷಣೆಗೆ ರೈತರ ಸಹಭಾಗಿತ್ವದ ಜೀನ್ ಬ್ಯಾಂಕ್‌ನ್ನು ಶಿರಸಿಯಲ್ಲಿ ಸ್ಥಾಪಿಸಲು ಕ್ರಮ
ಕೈಗೊಳ್ಳಬೇಕು.
* ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಕೃಷಿ ವಿಶ್ವ ವಿದ್ಯಾಲಯಗಳು ಹಲಸು ಸೇರಿದಂತೆ ಮಲೆನಾಡಿನ ತೋಟಗಾರಿಕೆ, ಕೃಷಿ, ಅರಣ್ಯ ಸುಸ್ಥಿರ ಅಭಿವೃದ್ಧಿಗೆ ವಿಶೇಷ ಆದ್ಯತೆ, ಗಮನ ಯೋಜನೆ
ಅನುದಾನ ನೀಡಬೇಕು.
* ಹಲಸು ಸುಸ್ಥಿರ ಅಭಿವೃದ್ಧಿಗೆ ಮಂಡಳಿ ರಚಿಸಲು ಸರ್ಕಾರಕ್ಕೆ ಪುನಃ ಒತ್ತಾಯ ಮಾಡಲು ನಿರ್ಣಯ.