ಹುಬ್ಬಳ್ಳಿ : ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತಿಯ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕೆ.ಎಲ್.ಇ. ಸಂಸ್ಥೆಯ ಪಿ.ಸಿ. ಜಾಬಿನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಬಂಧ, ಭಾಷಣ, ರಸಪ್ರಶ್ನೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೂರು ಕಾಲೇಜುಗಳ 30 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತ್ರಿಶಾ ಅಂಗಡಿ, ಸಾಕ್ಷಿ ಎಸ್., ದ್ವಿತೀಯ ಸ್ಥಾನವನ್ನು ಅನುಶಾ ಹತ್ತಲಗೇರಿ, ಅನುಶಾ ಜೇವೂರ, ತೃತೀಯ ಸ್ಥಾನವನ್ನು ತೇಜಸ್ವಿನಿ ಎಸ್.ಎ., ಸಹನಾ ನವಲಿ ಪಡೆದಿದ್ದಾರೆ.
ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅನುಶಾ ಹತ್ತಲಗೇರಿ, ದ್ವಿತೀಯ ಸ್ಥಾನವನ್ನು ಕನಕಕುಮಾರ ಕರಿಗಾರ, ತೃತಿಯ ಸ್ಥಾನವನ್ನು ಸಹನಾ ನವಲಿ ಪಡೆದುಕೊಂಡಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸರಸ್ವತಿ ಮಡಿವಾಳರ, ದ್ವಿತೀಯ ಸ್ಥಾನವನ್ನು ಪ್ರೇಮಾ ಎಸ್.ಆರ್., ತೃತಿಯ ಸ್ಥಾನವನ್ನು ತಾಯವ್ವ ಕಟಾವಿ ಪಡೆದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿ.ಆರ್. ವಾಘಮೋಡಿ ಹಾಗೂ ಡಾ. ಎಲ್.ಡಿ. ಹೊರಕೇರಿ ಅವರು ಸನ್ಮಾನಿಸಿದರು. ಪ್ರಾಧ್ಯಾಪಕರಾದ ಪ್ರೊ. ವೇಣುಗೋಪಾಲ ಎಚ್.ಆರ್., ಅಮೃತಾ ಅಣ್ಣಿಗೇರಿ ಹಾಗೂ ಇತರರು ಇದ್ದರು.