ಜಿಲ್ಲೆ

ಚೆಸ್‌ನಲ್ಲಿ ಜೆ.ಶಿವಾನಿ, ಎಂ.ಎಸ್.ಜ್ಞಾನವಿ ಸಾಧನೆ: ಮಂಡ್ಯ ರಾಯಲ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳು

ಮಂಡ್ಯ: ವಿವಿಧೆಡೆ ನಡೆದ ಚೆಸ್ ಟೂರ್ನಿಯಲ್ಲಿ ನಗರದ ಮಂಡ್ಯ ರಾಯಲ್ ಚೆಸ್ ಅಕಾಡೆಮಿಯ ಜೆ.ಶಿವಾನಿ ಹಾಗೂ ಎಂ.ಎಸ್.ಜ್ಞಾನವಿ ಸಾಧನೆ ಮಾಡಿದ್ದಾರೆಂದು ಅಕಾಡೆಮಿ ಮುಖ್ಯತರಬೇತುದಾರ ಎಂ.ಎಸ್.ಚೇತನ್ ಹೇಳಿದರು.

ಜೆ.ಶಿವಾನಿ ತ್ರಿಪುರಾದ ಅಗರ್ತಲಾದಲ್ಲಿ ನಡೆಯಲಿರುವ ಎಸ್‌ಜಿಎಫ್‌ಐ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ ಹಾಗೂ ಎಂ.ಎಸ್.ಜ್ಞಾನವಿ ಅವರು ಕರ್ನಾಟಕ-ಗೋವಾ ಜಂಟಿ ತಂಡದ ಸದಸ್ಯರಾಗಿ ಸಿಐಎಸ್‌ಸಿಇ ರಾಷ್ಟ್ರೀಯ 17 ವರ್ಷದೊಳಗಿನ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ವಿಜೇತರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆ.ಶಿವಾನಿ ಹಿಮಾಚಲಪ್ರದೇಶದ ಕಾಂಗ್ರಾ ಜೆಎನ್‌ವಿಯಲ್ಲಿ ನಡೆದ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ. ಜ್ಞಾನವಿ ಅವರು ಕರ್ನಾಟಕ-ಗೋವಾ ಜಂಟಿ ತಂಡದ 10 ಸದಸ್ಯರಲ್ಲಿ ಒಬ್ಬರಾಗಿ ಸ್ವರ್ಣ ಪದಕ ವಿಜೇತರಾಗಿದ್ದಾರೆ ಎಂದು ವರಿಸಿದರು.

ವಿದ್ಯಾರ್ಥಿನಿಯರಾದ ಜೆ.ಶಿವಾನಿ, ಎಂ.ಎಸ್.ಜ್ಞಾನವಿ, ಜಯಪಾಲ್, ಕೋಕಿಲಾ ಇದ್ದರು.