ಹುಬ್ಬಳ್ಳಿ: ಅತ್ಯುನ್ನತ ಸೇವೆಗೈದ ಹಾಗೂ ಸಾಧನೆ ಮಾಡಿದ 2023ನೇ ಸಾಲಿನ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಇಲ್ಲಿಯ ಗ್ರಾಮೀಣ ತಹಸೀಲ್ದಾರ್ ಜಂಬುನಾಥ ಬೂತಪ್ಪ ಮಜ್ಜಗಿ (ಜೆ.ಬಿ. ಮಜ್ಜಗಿ) ಭಾಜನರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬದಾಮಿ ಕಂದಾಯ ಇಲಾಖೆಯಲ್ಲಿ 2023ರಲ್ಲಿ ಗ್ರೇಡ್ ಒನ್ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿನ ಇವರ ಕಾರ್ಯಕ್ಕೆ ಪ್ರಶಸ್ತಿ ಲಭಿಸಿದೆ.
ಸದ್ಯ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರರಾಗಿ ಸೇವೆ ಸಲ್ಲಿಸುತ್ತಿರುವ ಜೆ.ಬಿ. ಮಜ್ಜಗಿ ಅವರು ಏ. 21ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 50 ಸಾವಿರ ರೂ. ನಗದು, ಫಲಕಗಳನ್ನು ಪ್ರಶಸ್ತಿ ಒಳಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಯ 30 ಅಧಿಕಾರಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.