ಶಿವಮೊಗ್ಗ: ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದರಲ್ಲಿ ತಪ್ಪುಲ್ಲ. ಆದರೆ ತೀರ ಅತಿರೇಖಕ್ಕೆ ಹೋಗಿ ಭಾವನಾತ್ಮಕವಾಗಿದ್ದು ಸರಿಯಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಐಪಿಎಲ್ ಜಾಗತಿಕ ಮಟ್ಟದಲ್ಲಿ ಗೆದ್ದ ಕಪ್ ಅಲ್ಲ. ರಾಜ್ಯದ (ರಣಜಿ ಇತ್ಯಾದಿ) ಕಪ್ ಕೂಡ ಅಲ್ಲ. ಇದೊಂದು ಕರ್ಮಷಿಯಲ್ ಕಪ್. ಇಡೀ ತಂಡವೇ ಬೇರೆ ಬೇರೆ ರಾಜ್ಯ, ದೇಶಗಳ ಆಟಗಾರರಿಂದ ಕೂಡಿದೆ. ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ನಡೆದ ಆಪರೇಷನ್ ಸಿಂಧೂರ ಪರ ಇಷ್ಟೊಂದು ಭಾವನಾತ್ಮಕವಾಗಿದ್ದರೆ ಸೈನಿಕರಿಗೆ ಮತ್ತಷ್ಟು ಸ್ಫೂರ್ತಿ ಬರುತ್ತಿತ್ತು ಎಂದರು.