ವಾಜರಹಳ್ಳಿ ಮುಖ್ಯ ರಸ್ತೆ ಅಭಿವೃದ್ಧಿಗೆ ಶಾಸಕ ಎನ್​.ಶ್ರೀನಿವಾಸ್​ ಭೂಮಿ ಪೂಜೆ ನೆರವೇರಿಸಿದರು. ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಸದಸ್ಯ ವಾಸು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಜಿ.ಆನಂದ್​, ಸ್ಥಾಯಿಸಮಿತಿ ಅಧ್ಯಕ್ಷ ಪದ್ಮನಾಭಪ್ರಸಾದ್​, ಮಾಜಿ ಅಧ್ಯೆ ಲತಾಹೇಮಂತಕುಮಾರ್​, ಸದಸ್ಯ ಪ್ರದಿಪ್​, ಸುನೀಲ್​ ಮೂಡ್​, ಲೋಲಾ ಗಂಗಾಧರ್​, ಭಾರತಿಬಾಯಿ, ನಗರಸಭೆ ನಿಟಕಪೂರ್ವ ಅಧ್ಯೆ ಪೂರ್ಣಿಮಾಸುಗ್ಗರಾಜು ಇದ್ದರು. 
ಜಿಲ್ಲೆ

ಸುಳ್ಳು ಶ್ರೀನಿವಾಸಮೂರ್ತಿ ಎಂದರೆ ತಪ್ಪಾಗಲ್ಲ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಸುದ್ದಿಗೋಷ್ಠಿ ಹಾಗೂ ಕಾರ್ಯಕರ್ತರ ಸಮಾವೇಶಗಳಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಓಡಾಡುತ್ತಿರುವ ಮಾಜಿ ಶಾಸಕರಿಗೆ ಸುಳ್ಳು ಶ್ರೀನಿವಾಸಮೂರ್ತಿ ಎಂದು ಮರುನಾಮಕರಣ ಮಾಡಿದರೂ ತಪ್ಪಾಗಲ್ಲ ಎಂದು ಶಾಸಕ ಎನ್​.ಶ್ರೀನಿವಾಸ್​ ವ್ಯಂಗ್ಯವಾಡಿದರು.

ನಗರಸಭೆ ವ್ಯಾಪ್ತಿಯ 10ನೇ ವಾರ್ಡ್​ನ ವಾಜರಹಳ್ಳಿ ಮುಖ್ಯರಸ್ತೆ ಅಭಿವೃದ್ಧಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲು ಮಾಜಿ ಶಾಸಕರಿಗೆ ಸಾಧ್ಯವಿಲ್ಲ ಎಂದು ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್​ ಮುಖಂಡರು, ಕಾರ್ಯಕರ್ತರು ಇದ್ದಾರೆ ಎಂಬ ಮಾಹಿತಿ ಇದೆ, ಆದ್ದರಿಂದ ಧೈರ್ಯವಿದ್ದಲ್ಲಿ ಪಕ್ಷದ ವರಿಷ್ಠರಿಂದ ಟಿಕೆಟ್​ ಪಡೆದು ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

ನಾಲ್ಕು ವರ್ಷಗಳ ಹಿಂದೆ ನಗರೋತ್ಥಾನ ಯೋಜನೆಯಡಿ ವಾಜರಹಳ್ಳಿ ಮುಖ್ಯರಸ್ತೆ ಕಾಮಗಾರಿ ಟೆಂಡರ್​ ಪಡೆದುಕೊಂಡಿದ್ದ ಗುತ್ತಿಗೆದಾರ ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ. ಆದರೆ ಈ ಭಾಗದ ಕೆಲಸ ಜೆಡಿಎಸ್​, ಬಿಜೆಪಿ ಮುಖಂಡರು ಗುತ್ತಿಗೆದಾರರ ಕಮಿಷನ್​ ಕೊಡದ ಕಾರಣಕ್ಕೆ ಶಾಸಕರು ಕಾಮಗಾರಿ ಮಾಡಲು ಬಿಡುತ್ತಿಲ್ಲ ಎಂಬುದಾಗಿ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಎಂದ ಅವರು, ಸದ್ಯ ಈಗ, ನಗರದ ಮುಖ್ಯ ರಸ್ತೆ ಅಭಿವೃದ್ಧಿ ಅನುದಾನದಲ್ಲಿ ಕಾಮಗಾರಿ ಮಾಡಲಾಗುವುದು ಎಂದರು.

ಗ್ಯಾರಂಟಿ ಸಮಿತಿ ಅದ್ಯೆ ನಾಗರತ್ನಮ್ಮ, ಮುಖಂಡರಾದ ಕೆಂಪರಾಜು, ಭಾಗ್ಯಕೆಂಪರಾಜು, ಲ್ಮನಾರಾಯಣ್​, ಕೆ.ಕೆ.ಕೃಷ್ಣಪ್ಪ, ವಕೀಲ ವಿಜಯ್​, ಹನುಮಂತಮ್ಮ, ಇಂದಿರಮ್ಮ, ರಾಮಕೃಷ್ಣಪ್ಪ, ಗಣೇಶ್​, ಮುನಿರಾಜು, ಪುರಸಭೆ ಮಾಜಿ ಸದಸ್ಯ ಭಾಗ್ಯರಾಜು ಇದ್ದರು.

ಸಾಬೀತು ಮಾಡಲಿ : ಸತ್ಯವಿದ್ದಲ್ಲಿ ಆರೋಪ ಮಾಡಲಿ, ಅದನ್ನು ಬಿಟ್ಟು ಮನಬಂದಂತೆ ನಾಲಿಗೆ ಹರಿಯಬಿಡುವುದನ್ನು ಬಿಡಬೇಕು. ಧೈರ್ಯವಿದ್ದಲ್ಲಿ ಗುತ್ತಿಗೆದಾರರನನ್ನು ಕರೆಸಿ ಕಮಿಷನ್​ ಆರೋಪ ಸಾಬೀತು ಮಾಡಲಿ, ಆಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಲು ಸಿದ್ಧವಿದ್ದೇನೆ ಎಂದು ಶಾಸಕ ಎನ್​.ಶ್ರೀನಿವಾಸ್​ ಹೇಳಿದರು.

ಬಹುದಿನಗಳಿಂದಲೂ ನನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಶಾಸಕರು ಭೂಮಿಪೂಜೆ ಮಾಡಿರುವುದು ಈ ಭಾಗದ ವಸತಿ ಬಡಾವಣೆ ಹಾಗೂ ವಾಜರಹಳ್ಳಿ ಜನರಲ್ಲಿ ಸಂತೋಷ ತಂದಿದೆ. ಗುಂಡಿಗಳಿಂದ ತುಂಬಿದ್ದ ರಸ್ತೆಯಲ್ಲಿ ಸಂಚಾರ ಮಾಡುವುದು ಕೆಲವೇ ದಿನಗಳಲ್ಲಿ ತಪ್ಪಲಿದೆ. | ಪೂರ್ಣಿಮಾ ಸುಗ್ಗರಾಜು ನಗರಸಭೆ ನಿಟಕಪೂರ್ವ ಅಧ್ಯಕ್ಷೆ