ಕಾರ್ಕಳ: ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಬೆಲೆ ಕೊಡಬೇಕು ಹಾಗೂ ಗೌರವಿಸಬೇಕು, ನಾವು ಬುದ್ಧಿವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲ್ಯಸುಧಾ- 37ರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ. ನಕಾರಾತ್ಮಕ ಚಿಂತನೆಯನ್ನು ನಿಯಂತ್ರಿಸಬೇಕು. ಸ್ವನಿಯಂತ್ರಣ ವಾನವನ ಕರ್ತವ್ಯವಾಗಬೇಕು. ಆತ್ಮಹತ್ಯೆ ಎಂಬುದು ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರವೆಂದು ಇಂದಿನ ಸವಾಜದ ತಪ್ಪು ತಿಳುವಳಿಕೆಯಾಗಿದೆ. ಹೋರಾಡಿ ಸಾಧಿಸುವ ಛಲ ನಮ್ಮದಾಗಬೇಕು. ಅನ್ಯಾಯದ ವಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯ ವಾರ್ಗದಲ್ಲಿ ಸೋಲುವುದು ನತೆಯಾಗಬೇಕು ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿಗಳು ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕಿ ಮಂಜುಳಾ ಭಟ್ ಪ್ರಾರ್ಥಿಸಿದರು. ಉಪನ್ಯಾಸಕ ಸಂತೋಷ್ ನೆಲ್ಲಿಕಾರು ನಿರೂಪಿಸಿ, ವಂದಿಸಿದರು.