ಚಿತ್ರದುರ್ಗ: ಆನ್ ಲೈನ್ ಪರೀಕ್ಷೆ ಹಾಗೂ ಪರೀಕ್ಷೆ ಗೆ ವಿಧಿಸಿರುವ ದುಬಾರಿ ಶುಲ್ಕವನ್ನು ವಿರೋಧಿಸಿ ಐಟಿಐ ವಿದ್ಯಾರ್ಥಿಗಳಿಂದು ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಐಡಿವೈಒ ಮುಖಂಡ ಲಿಂಗರಾಜ್, ಪ್ರಾಯೋಗಿಕ ಆಧರಿತ ಐಟಿಐ ಪರೀಕ್ಷೆಯನ್ನು ಆನ್‌ಲೈನ್ ನಲ್ಲಿ ನಡೆಸುವುದು ಸರಿಯಲ್ಲ. ಅಲ್ಲದೆ ಪರೀಕ್ಷೆಗೆ ದುಬಾರಿ ಶುಲ್ಕ ಹಾಗೂ ಈ ಶುಲ್ಕಕ್ಕೆ ಜಿಎಸ್ಟಿ ವಿಧಿಸುವುದನ್ನು ಖಂಡಿಸಿದರು.
ನಂತರ ನೂರಾರು ವಿದ್ಯಾಥಿಗಳೊಂದಿಗೆ ಡಿಸಿ ಕಚೇರಿಗೆ ತೆರಳಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ಸಂಜಯ್, ಮಂಜುನಾಥ, ಮಲ್ಲಿಕಾರ್ಜುನ ಮತ್ತಿತರರು ಇದ್ದರು.