ಜಿಲ್ಲೆ

ಐಟಿಐ, ಕೌಶಲ ತರಬೇತಿ ಕೋರ್ಸಿಗೆ ದಾಖಲಾತಿ, ಸೀಟುಗಳು ಲಭ್ಯ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಐಟಿಐ ಹಾಗೂ ಜಿ.ಟಿ.ಟಿ.ಸಿಯಲ್ಲಿ ಲಭ್ಯವಿರುವ ಕೌಶಲ ತರಬೇತಿ ಕೋರ್ಸಿಗೆ ದಾಖಲಾಗಿ, ಉದ್ಯೋಗ ಪಡೆದುಕೊಳ್ಳಲು ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಕೌಶಲ ತರಬೇತಿಗಳಿಗೆ ವಿದ್ಯಾರ್ಥಿಗಳು ದಾಖಲಾಗಿ ಉದ್ಯೋಗ ಪಡೆದುಕೊಳ್ಳುವ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ.ಎನ್​. ರವೀಂದ್ರ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ನಂತರ ಶೀಘ್ರದಲ್ಲಿಯೇ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಏನು ಮಾಡಬೇಕು ಎಂದು ಯೋಚಿಸುವ ಯುವಕ ಯುವತಿಯರಿಗೆ, ಅತಿ ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಕೌಶಲಗಳನ್ನು ಗಳಿಸಿಕೊಂಡು ಉದ್ಯೋಗಸ್ಥರಾಗಲು ಕೈಗಾರಿಕಾ ತರಬೇತಿ ಸಂಸ್ಥೆಗಳೂ ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಗಳಲ್ಲಿ ಭೋದಿಸಲಾಗುತ್ತಿರುವ ಕೋರ್ಸ್​ ಗಳು ದಾರಿ ದೀಪ ಎಂದರು.

ಜಿಲ್ಲೆಯಲ್ಲಿ ಹಲವಾರು ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು ಮುಂಬರುವ ದಿನಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳು ಸಿಗಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕೌಶಲಾಧಿಕಾರಿ ಪ್ರಸಾದ್​ ಮತ್ತಿತರರು ಇದ್ದರು.

*ವೃತ್ತಿಪರ ಕೌಶಲ ತರಬೇತಿ*

ಜಿಲ್ಲೆಯಲ್ಲಿ 7 ಸರ್ಕಾರಿ ಐಟಿಐ ಕಾಲೇಜುಗಳು ಹಾಗೂ ಗೌರಿಬಿದನೂರಿನಲ್ಲಿ ಜಿಟಿಟಿಸಿ ತರಬೇತಿ ಸಂಸ್ಥೆಯಿದ್ದು ಇಲ್ಲಿ ವೃತ್ತಿಪರ ಕೌಶಲ ತರಬೇತಿ ನೀಡಲಾಗುತ್ತಿದೆ.

ಐಟಿಐ ತರಬೇತಿ ಬಳಿಕ ಡಿಪ್ಲೋಮಾ, ಇಂಜಿನಿಯರಿಂಗ್​ ಹಾಗೂ ಪದವಿ ಶಿಕ್ಷಣವನ್ನು ಮುಂದುವರೆಸಲು ಅವಕಾಶವಿದ್ದು ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2 ವರ್ಷ ಅವಧಿಯ ಕೋರ್ಸ್​ಗಳಾದ ಎಲೆಕ್ಟ್ರಿಷಿಯನ್​, ಎಲೆಕ್ಟ್ರಾನಿಕ್​, ಮೆಕಾನಿಕ್​, ಫಿಟ್ಟರ್​, ಮೆಶಿನಿಫ್ಟ್​ಿ, ಮೆಕಾನಿಕ್​ ಮೋಟಾರ್​ ವೆಹಿಕಲ್​, ರ್ಟನರ್​ ಕೋರ್ಸ್​ ಗಳು ಲಭ್ಯವಿದ್ದು ಸರ್ಕಾರಿ ಐಟಿಐ ಬಾಗೇಪಲ್ಲಿ 36 ಸೀಟುಗಳು, ಶಿಡ್ಲಟ್ಟ -100, ಚಿಕ್ಕಬಳ್ಳಾಪುರ -66, ಮಂಡಿಕಲ್ಲು -52, ಚಿಂತಾಮಣಿ- 43, ಗೌರಿಬಿದನೂರು-23 ಮತ್ತು ಗುಡಿಬಂಡೆ-ಯಲ್ಲಿ 47 ಸೀಟುಗಳು ದಾಖಲಾತಿಗೆ ಅವಕಾಶ ಇದೆ. ಜಿಟಿಟಿಸಿ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್​ಟೂಲ್​&ಡೈ ಮೇಕಿಂಗ್​ 14 ಸೀಟುಗಳು, ಪ್ರೀಸಿಶನ್​ ಮ್ಯಾನುಫ್ಯಾಕ್ಚರಿಂಗ್​ 28 ಸೀಟುಗಳು ಲಭ್ಯವಿದೆ ಎಂದು ಜಿಲ್ಲಾ ಕೌಶಲ ತರಬೇತಿ ಕೇಂದ್ರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.