ಪುತ್ತೂರು: ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ನಡೆಯಿತು.
ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ರಾಷ್ಟ್ರೀಯ ಪ್ರಮಾಣಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಅಧ್ಯಕ್ಷತೆಯನ್ನು ದ. ಕ. ಗೌಡ ವಿದ್ಯಾಸಂಘ ಸುಳ್ಯದ ಅಧ್ಯಕ್ಷ ಧನಂಜಯ ಅಡ್ಪಂಗಾಯ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕ ಸಂಜೀವ ಮಠಂದೂರು, ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಎ.ವಿ. ನಾರಾಯಣ್, ಭಾರತ್ ಎಂಟರ್‌ಪ್ರೈಸಸ್ ಮಾಲಕಿ ಕೃಷ್ಣವೇಣಿ, ದ.ಕ. ಗೌಡ ವಿದ್ಯಾಸಂಘದ ಕೋಶಾಽಕಾರಿ ಮಾಧವ ಬೆಳ್ಳಾರೆ, ಜತೆಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಸಂಸ್ಥೆಯ ನಿರ್ದೇಶಕರಾದ ಚಿದಾನಂದ ಬೈಲಾಡಿ, ಜಯರಾಮ ಚಿಲ್ತಡ್ಕ, ಮುರಳೀಧರ ಕೆಮ್ಮಾರ, ಪ್ರಾಚಾರ್ಯರಾದ ಪ್ರಕಾಶ್ ಪೈ, ಮಾಜಿ ಪ್ರಾಚಾರ್ಯ ಭವಾನಿ ಗೌಡ, ಮಾಜಿ ಕಚೇರಿ ಅಽಕ್ಷಕ ಉಮೇಶ್ ಯಂ. ಉಪಸ್ಥಿತರಿದ್ದರು.