ಸಿಂಧನೂರು: ಲೂಕಿನ ಜವಳಗೇರಾ, ಆರ್.ಎಚ್.ಕ್ಯಾಂಪ್, ರೌಡಕುಂದ ಮತ್ತು ಸೋಮಲಾಪೂರು ಗ್ರಾಪಂಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಶುಕ್ರವಾರ ಭೇಟಿ ನೀಡಿ ನರೇಗಾ, ಜಲ ಜೀವನ ಮಿಷನ್ ಮತ್ತು ಪಿಆರ್‌ಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ: ಕೆಪಿಟಿಗೆ ವೆಹಿಕ್ಯುಲರ್ ಓವರ್ಪಾಸ್!, ಜಂಕ್ಷನ್ನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ, 40 ಕೋಟಿ ರೂ. ವೆಚ್ಚದ ಕಾಮಗಾರಿ
ಆರಂಭದಲ್ಲಿ ಜವಳಗೇರಾದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನಾಲಾ ಹೊಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರೊಂದಿಗೆ ಕೆಲಸ ನಿರ್ವಹಣೆ ಮತ್ತು ಕೂಲಿ ಮೊತ್ತ ಪಾವತಿ ಬಗ್ಗೆ ಚರ್ಚೆ ನಡೆಸಿದರು. ಅಧಿಕಾರಿಗಳು ಸಕಾಲಕ್ಕೆ ಕೆಲಸ ನೀಡುತ್ತಿರುವ ಬಗ್ಗೆ ಕೂಲಕಾರರೊಂದಿಗೆ ಸಮಲೋಚಿಸಿ ಮಾಹಿತಿ ಪಡೆದುಕೊಂಡರು.
ಜಲಾಧಾರೆ ಪೈಪ್‌ಲೈನ್ ಕಾಮಗಾರಿ, ಎಂವಿಎಸ್ ಹಾಗೂ ಕುಡಿವ ನೀರಿನ ಒವರ್ ಹೆಡ್ ಟ್ಯಾಂಕ್ ಪರಿಶೀಲಿಸಿ, ಟ್ಯಾಂಕ್ ಕಾಲಕಾಲಕ್ಕೆ ಸ್ವಚ್ಛಗೊಳಿಸುವಂತೆ ಮತ್ತು ಗ್ರಾಮಸ್ಥರಿಗೆ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಲೋಪದೋಷಗಳು ಬಾರದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಬಾಲಯ್ಯ ಕ್ಯಾಂಪ್‌ನಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಫಲಾನುಭವಿಗಳಿಗೆ ನಳ ಸಂಪರ್ಕ ಕಲ್ಪಿಸಿರುವುದನ್ನು ಸ್ವತಃ ಪರಿಶೀಲಿಸಿ, ನೀರು ಬರುತ್ತಿದೆಯೇ ಇಲ್ಲವೋ ಎಂಬುದನ್ನು ಗ್ರಾಮಸ್ಥರನ್ನು ಕೇಳಿ ಮಾಹಿತಿ ಪಡೆದುಕೊಂಡರು. ನರೇಗಾದಡಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಾಕಿ ಕಾಮಗಾರಿ ಶೀಘ್ರ ಮುಗಿಸುವಂತೆ ಸಂಬಂಧಿಸಿದವರೆಗೆ ಸೂಚಿಸಿದರು. ಆರ್.ಎಚ್.ಕ್ಯಾಂಪ್‌ನಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸಿರುವುದನ್ನು ಪರಿಶೀಲಿಸಿದರು. ರೌಡಕುಂದಾ ಗ್ರಾಪಂ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಕಡತಗಳ ನಿರ್ವಹಣೆ ಕುರಿತು ಸಮಾಲೋಚಿಸಿದರು. ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಹೆಚ್ಚು ಫಲಾನುಭವಿಗಳ ಹೆಸರು ನೋಂದಾಯಿಸಬೇಕು. ನೊಂದಾಯಿಸಬೇಕು. ಅಮೃತ ಸರೋವರ ಯೋಜನೆಯಡಿ ನಿರ್ಮಾಣ ಮಾಡಿರುವ ಕೆರೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಾಸಲಮರಿ ಕ್ಯಾಂಪ್‌ನಲ್ಲಿ ಜಲಜೀವನ ಮೀಷನ್ ಯೋಜನೆಯಡಿ ಕಲ್ಪಿಸಿರುವ ಮನೆ ಮನೆಗೆ ಗಂಗೆ ಸಂಪರ್ಕದ ಗುಣಮಟ್ಟ ಪರಿಶೀಲಿಸಿ, ನಳದೊಳಗೆ ನೀರು ಬರುವುದನ್ನು ಖಾತ್ರಿಪಡಿಸಿಕೊಂಡರು. ನಂತರ ಕ್ಯಾಂಪ್‌ನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು. ತಾಪಂ ಇಒ ಲಕ್ಷ್ಮಿದೇವಿ, ಸಹಾಯಕ ನಿರ್ದೇಶಕ ಮನೋಹರ ಗುಂಜಳ್ಳಿ, ಪಿಆರ್‌ಇಡಿ ಅಧಿಕಾರಿ ಶಿವಪ್ಪ ಇತರರಿದ್ದರು.