ಮುದಗಲ್ ಕಿಲ್ಲಾದಲ್ಲಿ ಸಾಮೂಹಿಕ ಖತ್ನಾ ಕಾರ್ಯಕ್ರಮ ನಡೆಯಿತು. ಪುರಸಭೆ ಉಪಾಧ್ಯಕ್ಷ ಅಜಮೀರ ಬೆಳ್ಳಿಕಟ್, ಧರ್ಮ ಗುರು ಜಮೀರ್ ಅಹ್ಮದ ಖಾಜಿ, ಪುರಸಭೆ ಸದಸ್ಯರಾದ ಅಮೀರಬೇಗ್ ಉಸ್ತಾದ, ಎಸ್.ಆರ್. ರಸೂಲ, ಮಹಿಬೂಬ ಕಡ್ಡಿಪುಡಿ, ಡಾ. ಫಜಲ್ ಖಾದ್ರಿ ಎಂ.ಎಸ್., ದಾವೂದ್‌ಸಾಬ, ಅನ್ವರ ಕಂದಗಲ್ಲ ಇತರರಿದ್ದರು.. 
ಜಿಲ್ಲೆ

ಚುರುಕು ಬುದ್ಧಿಗೆ ನೆರವಾಗಲಿದೆ ಖತ್ನಾ

ರುದ್ರಪ್ಪ ವಾಲಿ

ಮುದಗಲ್: ಮಾರಕ ರೋಗ ತಡೆಗೆ ಖತ್ನಾ ಸಹಕಾರಿಯಾಗಿದೆ ಎಂದು ವಿಜಯಪುರ ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಕ ಜಿಲಾನಿ ಆವಟಿ ಹೇಳಿದರು.

ಪಟ್ಟಣದ ಕಿಲ್ಲಾದಲ್ಲಿ ಕಲ್ಯಾಣ ಕರ್ನಾಟಕ ದರ್ವೆಶು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಜಯಪುರ ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆರ್.ಕೆ. ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಸಾಮೂಹಿಕ ಖತ್ನಾ (ಮುಂಜಿ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಸ್ಲಿಂ ಸಮಾಜದಲ್ಲಿ ಖತ್ನಾ ಮಾಡುವುದು ಮುಖ್ಯವಾದ ಘಟ್ಟವಾಗಿದೆ. ಇದು ವೈಜ್ಞಾನಿಕವಾಗಿದ್ದು, ಮಕ್ಕಳ ಬೆಳವಣಿಗೆಗೆ ಮತ್ತು ಚುರುಕು ಬುದ್ಧಿಗೆ ನೆರವಾಗಲಿದೆ ಎಂದರು. 150 ಮಕ್ಕಳಿಗೆ ಉಚಿತ ಖತ್ನಾ ನೆರವೇರಿಸಲಾಯಿತು. ಕಕ ದರ್ವೇಶ ಸಂಘದ ಜಿಲ್ಲಾಧ್ಯಕ್ಷ ರಹಿಂಶಾ ಮಕಾನ್‌ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಿಯುದ್ದೀನ್ ಭಂಡಾರಿ, ಡಾ. ಹಾಜಿ ಮಸ್ತಾನ್, ಡಾ. ನವೀತ್ ಕಂದಗಲ್ಲ, ಮೀರುಷಾ, ಪೀರಾಷಾ, ಷೇರಲಿ, ಶಾಮಿದ್ ಷಾ ಇತರರಿದ್ದರು.