ಆಲಮೇಲ: ತಾಲೂಕುಮಟ್ಟದಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲದ್ದರಿಂದ ಬಡ ರೋಗಿಗಳು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಲಾಗಿದೆ. ಕಿಡ್ನಿ ರೋಗದಿಂದ ಬಳಲುತ್ತಿರುವ ಬಡ ರೋಗಿಗಳು ಇದರ ಲಾಭ ಪಡೆಯಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
43 ಹಳ್ಳಿಗಳ ಕೇಂದ್ರ ಸ್ಥಾನವಾದ ಆಲಮೇಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ವೈದ್ಯರನ್ನು ನೇಮಿಸುವ ಮೂಲಕ ತಾಲೂಕು ಆರೋಗ್ಯ ಕೇಂದ್ರವನ್ನಾಗಿ ಮೇರ್ಲ್ದಜೇಗೆರಿಸುವೆ ಎಂದು ಭರವಸೆ ನೀಡಿದರು.
ಡಿಎಚ್ಒ ಸಂಪತಕುಮಾರ ಗುಣಾರಿ ಮಾತನಾಡಿ, ಈ ಆಸ್ಪತ್ರೆ ತಾಲೂಕು ಆಸ್ಪತ್ರೆಯ ಎಲ್ಲ ಸೌಲಭ್ಯಗಳನ್ನು ಹೊಂದಿದ್ದು, ಶಾಸಕರು ಆಲಮೇಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇರ್ಲ್ದಜೇಗೆರಿಸಿ ತಾಲೂಕು ಆರೋಗ್ಯ ಕೇಂದ್ರವನ್ನಾಗಿ ಮಾಡಬೇಕು ಎಂದರು.
ನಾಗರಿಕ ವೇದಿಕೆಯ ಅಧ್ಯ ರಮೇಶ ಭಂಟನೂರ ಮಾತನಾಡಿ, ಹಲವಾರು ವರ್ಷಗಳಿಂದ ಆಲಮೇಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಕ್ತ ವೈದ್ಯರನ್ನು ನೇಮಿಸುವಂತೆ ಗ್ರಾಮಸ್ಥರೆಲ್ಲರೂ ಹತ್ತು ಹಲವು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಇಲ್ಲಿಯವರೆಗೆ ಈ ಆಸ್ಪತ್ರಗೆ ಖಾಯಂ ವೈದ್ಯರನ್ನು ನೇಮಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಲರಾಗಿದ್ದಾರೆ. ಅದಕ್ಕಾಗಿ ಈ ಆಸ್ಪತ್ರೆ ಆವರಣದಲ್ಲಿ ಒಂದು ಪೊಲೀಸ್ ಚೌಕಿ ನಿರ್ಮಿಸಿ ಇಲ್ಲಿ ಇಬ್ಬರು ಪೊಲೀಸರನ್ನು ನೇಮಿಸಿ ಸೂಕ್ತ ವೈದ್ಯರನ್ನು ತರುವಂತಹ ಕೆಲಸವಾಗಬೇಕು ಎಂದರು.
ಾರ್ಮಾಸಿಸ್ಟ್ ಅಶೋಕ ತೆಲ್ಲೂರ ಮಾತನಾಡಿದರು. ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹಾಗೂ ದೇವರಗುಡ್ಡದ ಒಡೆಯರಾದ ಡಾ.ಸಂದೀಪ ಪಾಟೀಲ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಆರೋಗ್ಯ ಶಿಣಾಧಿಕಾರಿ ಶ್ರೀಹರಿ ಕುಲಕರ್ಣಿ, ಡಿಎಸ್ಒ ಡಾ.ಅಪ್ಪಾಸಾಬ ಇನಾಂದಾರ, ಆಡಳಿತ ಅಧಿಕಾರಿ ಡಾ.ಮಂಜುನಾಥ ಆಕಾಶಿ, ನೇತ್ರಾಧಿಕಾರಿ ಡಾ.ಸುರೇಶ ಮಹಿಂದ್ರಕರ್, ಪಪಂ ಅಧ್ಯ ಸಾದೀಕ ಸುಂಬಡ, ವಿರಭದ್ರ ಕತ್ತಿ, ಬಾಬು ಕೋತಂಬರಿ, ಶಶಿ ಗಣಿಗಾರ, ಭೀಮು ಬಮ್ಮನಹಳ್ಳಿ, ಸಂದೇಶ ಜೋಗುರ, ಸಂತೋಷ ಕುಂಬಾರ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು. ಡಾ.ಜಿ.ಎಸ್.ಪತ್ತಾರ ಸ್ವಾಗತಿಸಿದರು.