ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಕೆರೆಕಟ್ಟೆಯ ಮೇಲೆ ಸುರಿದಿರುವ ಕೋಳಿ ತ್ಯಾಜ್ಯ.  
ಜಿಲ್ಲೆ

ಗಬ್ಬುನಾರುತ್ತಿದೆ ತೂಬಗೆರೆ ಕೆರೆಏರಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚಹಳ್ಳಿ ಸಮೀಪದಲ್ಲಿನ ತೂಬಗೆರೆ ಕೆರೆಏರಿ ಕೋಳಿತ್ಯಾಜ್ಯದ ರಾಶಿಯಿಂದ ಗಬ್ಬುನಾರುತ್ತಿದೆ. ಕಿ.ಮೀ.ಗಟ್ಟಲೆ ದುರ್ವಾಸನೆ ಮೂಗಿಗೆ ರಾಚುತ್ತಿದ್ದು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.

ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿನ ಕೋಳಿ ಮಾಂಸ ಮಾರಾಟದ ಅಂಗಡಿ ಮಾಲೀಕರು ಕೋಳಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದೇ ಇಂಥ ದುಸ್ಥಿತಿಗೆ ಕಾರಣವಾಗಿದೆ. ಈ ಬಗ್ಗೆ ತೂಬಗೆರೆ ಪಂಚಾಯಿತಿ ಯೂ ರ್ನಿಲಕ್ಷ$್ಯ ಧೋರಣೆ ಮುಂದುವರಿಸಿರುವುದರಿಂದ ಕೋಳಿ ಅಂಗಡಿ ಮಾಲೀಕರಿಗೆ ಕಡಿವಾಣ ಇಲ್ಲವಾಗಿದೆ. ಪಂಚಾಯಿತಿಗೆ ಈ ಬಗ್ಗೆ ಯಾವುದೇ ಹಿಡಿತವಿಲ್ಲ. ಆದ್ದರಿಂದ ಮನಬಂದಂತೆ ಕೋಳಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.

ಜಾನುವಾರು ಪ್ರಾಣಕ್ಕೂ ಕುತ್ತು: ತೂಬಗೆರೆ ಕೆರೆ&ಕಟ್ಟೆ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳ ಕುಡಿವ ನೀರಿನ ತಾಣವಾಗಿದೆ, ಆದರೆ ಕೋಳಿ ತ್ಯಾಜ್ಯ ಕೆರೆಏರಿ ಮೂಲಕ ಕೆರೆ ಒಡಲು ಸೇರುತ್ತಿದ್ದು, ಕೆರೆ ನೀರೂ ಮಲಿನವಾಗುತ್ತಿದೆ. ಈ ನೀರನ್ನು ಕುಡಿದ ಜಾನುವಾರುಗಳು ಹಲವು ರೋಗಗಳಿಗೆ ತುತ್ತಾಗಿ ಅವುಗಳ ಪ್ರಾಣಕ್ಕೂ ಕಂಟವಾಗುತ್ತಿದೆ ಎಂದು ಹೈನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಕೆರೆ&ಕಟ್ಟೆಗಳ ಜೀಣೋರ್ದ್ದಾರಕ್ಕೆ ಆಂದೋಲನ ನಡೆಸುತ್ತಿದೆ. ಆದರೆ ಇರುವ ಜಲಮೂಲದ ರಕ್ಷಣೆ ಬಗ್ಗೆ ಪಂಚಾಯಿತಿ ರ್ನಿಲಕ್ಷ$್ಯ ಧೋರಣೆ ಅನುಸರಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುದಾನ ಏನು ಮಾಡುತ್ತಾರೆ? : ಸಮರ್ಪಕ ತ್ಯಾಜ್ಯ ವಿಲೇವಾರಿಗೆ ತೂಬಗೆರೆ ಗ್ರಾಮ ಪಂಚಾಯಿತಿಗೆ ಲಾಂತರ ರೂಪಾಯಿ ಅನುದಾನ ಬರುತ್ತದೆ, ಆದರೆ ಅನುದಾನವನ್ನು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ, ಕಸ ನಿರ್ವಹಣೆಯ ಹಣದ ಸಮರ್ಪಕ ಬಳಕೆಯಾದರೆ ಪಂಚಾಯಿತಿ ಮತ್ತಷ್ಟು ನೈರ್ಮಲ್ಯ ಕಾಣಲು ಸಾಧ್ಯ ಎಂಬುದು ಗ್ರಾಮಸ್ಥರ ಅಭಿಮತವಾಗಿದೆ.

ಸೊಳ್ಳೆಗಳ ಕಾಟ : ಕೆರೆ ಏರಿ ಬಳಿ ಉದ್ದಕ್ಕೂ ಸುರಿದಿರುವ ಕೋಳಿ ತ್ಯಾಜ್ಯದಿಂದ ಸೊಳ್ಳೆ, ನೊಣಗಳ ಕಾಟ ವಿಪರೀತವಾಗಿದೆ, ಇವುಗಳಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇವುಗಳೊಂದಿಗೆ ಬೀದಿ ನಾಯಿಗಳ ಉಪಟಳವೂ ಹೆಚ್ಚಿದೆ. ಕೋಳಿತ್ಯಾಜ್ಯ ಭಕ್ಷಣೆಗೆ ಮುಗಿಬೀಳುವ ಶ್ವಾನಗಳು ದಾರಿಹೋಕರ ಮೇಲೂ ದಾಳಿ ನಡೆಸುವ ಪ್ರಕರಣಗಳು ನಡೆಯುತ್ತಿವೆ. ಹತ್ತಿಪ್ಪತ್ತು ಶ್ವಾನಗಳು ಕೆರೆಏರಿ ಬಳಿಯೇ ಸುಳಿದಾಡುತ್ತಿದ್ದು ಒಂಟಿಯಾಗಿ ಸಂಚರಿಸುವುದೇ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ.

ಕೋಳಿತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ಏಕೆಂದರೆ ನಾವು ಹೇಳಿದಾಗ ಸ್ವಚ್ಛತೆ ಮಾಡುತ್ತಾರೆ, ಸ್ವಚ್ಛತೆ ಆದ ಮೇಲೆ ಮತ್ತೆ ಯಥಾಸ್ಥಿತಿ ಕಂಡುಬರುತ್ತದೆ, ಇದು ಪಂಚಾಯಿತಿಯ ಬೇಜವಾಬ್ದಾರಿಯಾಗಿದೆ, ಎಲ್ಲ ಕೋಳಿ ಅಂಗಡಿಗೂ ನೋಟಿಸ್​ ಜಾರಿ ಮಾಡಿ ಅಗತ್ಯ ಕೈಗೊಂಡರೆ ಪರಿಸ್ಥಿತಿ ಸರಿ ಹೋಗುತ್ತದೆ ಇಲ್ಲದಿದ್ದರೆ ಕೋಳಿ ತ್ಯಾಜ್ಯ ದುರ್ವಾಸನೆಯಿಂದ ಮುಕ್ತಿ ಇಲ್ಲದಂತಾಗುತ್ತದೆ. > ಸುರೇಶ್​ ಕಾಚಹಳ್ಳಿ ಗ್ರಾಮಸ್ಥ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ್​ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಹಾಗಾಗಿ ಕೆರೆ&ಕಟ್ಟೆ ಮೇಲೆ ದಿನನಿತ್ಯ ಓಡಾಡುವ ಕಾಚಹಳ್ಳಿ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉದ್ಭವವಾಗಿದೆ, ಎಲ್ಲ ಅಂಗಡಿಗಳಿಗೂ ನೋಟಿಸ್​ ನೀಡಿ ಅವರಿಗೆ ಒಂದು ಜಾಗ ಗುರುತು ಮಾಡಿ ಅಲ್ಲೇ ತ್ಯಾಜ್ಯವನ್ನು ಹಾಕುವಂತೆ ಹೇಳಬೇಕು ಹಾಗೂ ಕೆರೆಕಟ್ಟೆ ಮೇಲೆ ಸೋಲಾರ್​ ಕ್ಯಾಮೆರಾ ಅಳವಡಿಸಲು ತಿಳಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. > ಕೃಷ್ಣಪ್ಪ ಗ್ರಾಮ ಪಂಚಾಯಿತಿ ಸದಸ್ಯ