ಸೊರಬ: ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಮಳೆ ಹಾಗೂ ನಾಡಿನ ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿ ಶ್ರೀ ಬಸವೇಶ್ವರ ದೇವರಿಗೆ ಸೋಮವಾರ ವಿಶೇಷ ಅಭಿಷೇಕ ಪೂಜೆ ಸಲ್ಲಿಸಲಾಯಿತು. ಪುರೋಹಿತ ಚಂದ್ರಶೇಖರಯ್ಯ, ಅರ್ಚಕರಾದ ನಾಗರಾಜ್ ಪೂಜಾರ್, ಇಂದೂಧರಯ್ಯ, ಪವನ್ ಪೌರೋಹಿತ್ಯದಲ್ಲಿ ಪಂಚಾಮೃತ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಅಂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಎಸ್.ಹೇಮಚಂದ್ರ, ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ್, ಕಾರ್ಯದರ್ಶಿ ಉಮೇಶ್, ಉಪಾಧ್ಯಕ್ಷ ಅಶೋಕಗೌಡ, ಖಜಾಂಚಿ ಶೇಷಪ್ಪ, ಅಂಡಿಗೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಮಂಜಪ್ಪ, ಎಸ್.ಎಂ.ನೀಲೇಶ್, ವೀರಪ್ಪ ಗೌಡ, ತಾರಪ್ಪ, ಎಸ್.ಡಿ.ನಾಗರಾಜ್, ಬಸವರಾಜ ಗೌಡ, ರಾಜು ಆಟೋ, ನಾಗೇಂದ್ರಪ್ಪ, ಸತ್ಯನಾರಾಯಣ ಇತರರಿದ್ದರು. ಪೂಜೆ ಮುಗಿದು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಮಳೆ ಬಂದಿದ್ದು ವಿಶೇಷವಾಗಿತ್ತು.